ಶಹಾಪುರ : ಕಂಕಣ ಸೂರ್ಯಗ್ರಹಣದ ಮಧ್ಯೆಯೂ ಶಹಾಪುರದ ಕುಂಬಾರ ಓಣಿಯ ಯುವಕರು ವಡಾಪಾವ್ ಸೇವಿಸಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.ಇಂದಿನ ಯುವಜನತೆ ಮೌಢ್ಯತೆಯಿಂದ ಹೊರಬಂದು ವೈಚಾರಿಕತೆಯ ಚಿಂತನೆಗಳತ್ತ ಸಾಗುತ್ತಿದ್ದಾರೆ ಎಂದು ಪ್ರಗತಿಪರ ಚಿಂತಕರಾದ ಶಿವಣ್ಣ ಇಜೇರಿ ಹರ್ಷ ವ್ಯಕ್ತಪಡಿಸಿದರು.
ಸೂರ್ಯ, ಚಂದ್ರ ಗ್ರಹಣ ನಡೆಯುವುದು ಈ ಪ್ರಕೃತಿಯಲ್ಲಿ ಸಹಜ ಆದರೆ ಮುಗ್ಧ ಜನರನ್ನು ಕೆಲವೊಂದು ಶಕ್ತಿಗಳು ಭಯಭೀತಿ ಗೊಳಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಕೃತಿಯಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಹೇಗೆ ಬದಲಾವಣೆಯಾಗುತ್ತಾ ಇರುತ್ತವೆಯೋ ಹಾಗೆ ಆಗಾಗ ಚಂದ್ರನಿಗೂ ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ. ಯಾವುದಕ್ಕೂ ಅಂಜದೇ ಹೆದರದೆ ಅಳುಕದೆ ಸಾರ್ವಜನಿಕರು ಮೌಢ್ಯತೆಯಿಂದ ಹೊರಬರಬೇಕು ಎಂದರು.
ಈ ಸಂದರ್ಭದಲ್ಲಿ ಶಿವು ಮ್ಯಾಗಿನಮನಿ, ಶರಣು ಕಟ್ಟಿಮನಿ,ರಾಘವೇಂದ್ರ ಸಗರ, ಬಸ್ಸು ಕುಂಬಾರಹಳ್ಳಿ, ಸಿದ್ದು ಕೆಂಭಾವಿ,ಬಸ್ಸು ಬೊಮ್ಮನಹಳ್ಳಿ, ನಾಗರಾಜ ಕುರುಕುಂದಿ, ವಿಶ್ವನಾಥ್ ಬಿಳವಾರ ಹಾಗೂ ಇತರರು ಹಾಜರಿದ್ದರು.