ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಸಂತ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದಾರಾಜ್ (ರ.ಅ) ದರ್ಗಾದ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಕೊರೊನಾ ಹಿನ್ನೆಯಲ್ಲಿ ಸರಕಾರ ಜಾರಿಗೊಳಿಸಿರುವ ನಿಯಮದಂತೆ ಕೋವಿಡ್-19 ತಡೆಗಟ್ಟುವ ಮುಂಜಾಗೃತೆ ಕ್ರಮ ವಹಿಸುವ ಮೂಲಕ ಭಕ್ತರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದರ್ಗಾದ ಪೀಠಾಧಿಪತಿಗಳಾದ ಡಾ. ಸೈಯದ್ ಷಾ ಖುಸ್ರೋ ಹುಸೇನಿ ಅವರು ತಿಳಿಸಿದ್ದಾರೆ.
ಕೊರೊನಾ ಮಹಾಮಾರಿಯಿಂದಾಗಿ ಕಳೆದ ಎರಡು ತಿಂಗಳಕ್ಕಿಂತ ಅಧಿಕ ಸಮಯದ ವೆರೆಗೆ ದರ್ಗಾದ ಪ್ರವೇಶಕ್ಕೆ ಭಕ್ತರಿಗೆ ನಿರ್ಭಂಧಿಸಿ, ದರ್ಗಾವನ್ನು ಸಂಪೂರ್ಣ ಬಂದ್ ಮಾಡಲಾಗಿತು.
ಸರಕಾರದ ಅದೇಶ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿದ ನೂತನ ನಿಯಮಗಳನ್ವಯ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರ ಮತ್ತು ದರ್ಗಾದ ನಿಯಮಗಳನ್ನು ಪಾಲಿಸಿ ಭಕ್ತಾಧಿಗಳು ದರ್ಶನ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದಕ್ಕೆ ಸ್ಪಂದಿಸಿ, ಸಹಕರಿಸಬೇಕೆಂದು ಭಕ್ತರಲ್ಲಿ ದರ್ಗಾದ ಸಜ್ಜಾದ ನಾಶಿನ್ ಖುಸ್ರೋ ಹುಸೇನಿ ಅವರು ಕೋರಿದ್ದಾರೆ.
ದರ್ಶನಕ್ಕೆ ನೂತನ ವೇಳಾಪಟ್ಟಿ: ಸೋಮವಾರ ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 2-00 ರವರೆಗೆ ಮತ್ತು 4-30 ಪಿಎಂ ವರೆಗೆ 7-30 ಪಿಎಂ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದ್ದು, 10 ವರ್ಷದ ಮಕ್ಕಳು ಮತ್ತು 60 ವರ್ಷ ವಯಸ್ಸಿನವರಿಗೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ.