ಕಲಬುರಗಿ: ಕೋವಿಡ್-19 ಕಂಟಕ್ಕೆ ಜಿಲ್ಲೆಗೆ ಕಾಡುತ್ತಿದ್ದು, ಇಂದು ಮತ್ತೆ 27 ಕೊರೊನಾ ಪಾಜಿಟಿವ್ ಪ್ರಕರಣಗಳು ದೃಢಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಖಚಿತ ಪಡಿಸಿದೆ.
ಕಂಟೈನ್ಮೆಂಟ್ ಝೋನ್ ಒಬ್ಬರಿಗೆ, ಇಬ್ಬರಿಗೆ ರೋಗಿಗಳಿಂದ ಸಂಪರ್ಕದಿಂದ ತಗುಲಿದೆ. ಇಬ್ಬರಿಗೆ ತೆಲಂಗಾಣ ರಾಜ್ಯದಿಂದ ಪ್ರಯಾಣದ ಹಿನ್ನೆಲೆ ಹೊಂದಿದ ವ್ಯಕ್ತಿಗಳಿಗೆ ಪಾಜಿಟಿವ್ ಆಗಿದೆ. ಜಿಲ್ಲೆಯಲ್ಲಿ ಒಟ್ಟು ಇಂದಿನ 27 ಪಾಜಿಟಿವ್ ಸೇರಿ 1226 ಪೀಡಿತರ ಸಂಖ್ಯೆ ತಲುಪಿದೆ.
ಇದೇ ರೀತಿ 34 ಜನ ಕೊರೊನಾ ಪೀಡಿತರು ಚಿಕಿತ್ಸೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.