ಕಲಬುರಗಿ: ಕೊರೊನಾ ಮಹಾಮಾರಿ ನಡೆವೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆರೋಗ್ಯ ಹಿತ ದೃಷ್ಟಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಲಾಗುವುದೆಂದು ನಯಾ ಸವೇರಾ ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ಅವರು ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ 25 ರಂದು ನಡೆಯುವ ಪರೀಕ್ಷಾ ಕೇಂದ್ರದ ಮುಂದೆ ಪರೀಕ್ಷಾರ್ಥಿಗಳಿಗೆ ವಿತರಸುವ ಕೆಲಸ ಸಂಸ್ಥೆ ಹಮ್ಮಿಕೊಂಡಿದೆ.
ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಘಟನೆಯ ಮಹಿಮುದ ಪಟೇಲ್, ಸಲೀಮ್ ಅಹ್ಮದ್ ಚಿತಾಪುರ, ಸೈಯದ್ ಏಜಾಜ್ ಅಲಿ ಇನಮ್ದಾರ್, ಸಾಜಿದ್ ಅಲಿ ರಂಜೋಳವಿ, ಖಾಜಾ ಪಾಟೀಲ್ ಸರಡಗಿ, ಹೈದರ್ ಅಲಿ ಇನಮ್ದಾರ್, ಶೇಖ್ ಸೀರಾಜ್ ಪಾಷಾ, ಸೈರಾ ಬಾನು, ಅಬ್ದುಲ್ ವಾಹಿದ್ ಸಲೀಮ್ ಸಗರಿ, ಮೊಹಮ್ಮದ್ ಖಾಲಿಕ್, ರಿಯಾಜ್ ಪಟೇಲ, ಜಿಲಾನ್ ಗುತ್ತೇದಾರ್, ಮಹಿಬೂಬ್ ಖಾನ್, ಸುಮನ್ ಪಟೇಲ, ರುಕ್ನುದ್ದಿನ್ ಖಾಜಿ, ಬಾಬಾ ಫಕ್ರುದ್ದಿನ್ ಅನ್ಸಾರಿ, ಅಖಿಲ್ ಪಾಟೀಲ, ಅಡ್ವಕೇಟ್ ಬಾಬಾ ಪಟೇಲ ಸರಡಗಿ, ಸಲ್ಮಾನ್ ಪಟೇಲ್ ಹಡಲಗಿ ಹಾಗೂ ಅಮಿನುದ್ದಿನ್ ಸಾಬ್ ಟೈಲರ್ ಅವರ ನೇತೃತ್ವದಲ್ಲಿ ವಿತರಿಸುವ ಗುರಿಯಾಗಿದೆ ಎಂದು ತಿಳಿಸಿದ್ದಾರೆ.