ಕಲಬುರಗಿ: ಬ್ಯಾಂಕ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ-ಕೋಟಿ ವಂಚನೆ ಮಾಡುತ್ತಿದೆ. ನಾಲ್ಕು ಜನರ ಈ ಗ್ಯಾಂಗ್‌ನಲ್ಲಿ ಒಬ್ಬನನ್ನು ಕಲಬುರಗಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿ, ಮಹೇಂದ್ರ ರೆಕ್ಸ್ಟಾನ್, ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ತಾಪುರ ತಾಲೂಕಿನ ಬಸವಂತರಾಯ್ ಪಾಟೀಲ್ ಮತ್ತು ಮೂರು ಜನ ಸ್ನೇಹಿತರು ಕಾರ್ ಲೋನ್ ಹೆಸರಲ್ಲಿ ವಂಚನೆ ಮಾಡುವ ಈ ಖತರ್ನಾಕ್ ಗ್ಯಾಂಗ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗಳಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೊಸ ಕಾರ್ ಖರೀದಿಸುವುದಾಗಿ ಇಲ್ಲಿನ ಕೃಷ್ಣಾ ಗ್ರಾಮೀಣ ಬ್ಯಾಂಕ್‌ವೊಂದರಲ್ಲೇ ಬರೋಬ್ಬರಿ 45 ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿದೆ. ಕೇವಲ ಕೆಜಿಬಿ ಬ್ಯಾಂಕ್ ಅಷ್ಟೇ ಅಲ್ಲ, ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕ್‌ಗಳಲ್ಲಿ ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿತ್ತಾಪುರ ತಾಲೂಕಿನ ಬಸವಂತರಾಯ್ ಪಾಟೀಲ್ ಮತ್ತು ಮೂರು ಜನ ಸ್ನೇಹಿತರು ಸೇರಿ ನಂದಿ ಟೊಯೊಟಾ ಶೋ ರೂಮ್‌ನಿಂದ ಕೊಟೇಷನ್ ಪಡೆದು ಬಳಿಕ ಅದನ್ನ ನಕಲು ಮಾಡಿ ಬ್ಯಾಂಕ್‌ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ಸಾಲ ಅಪ್ರೂವಲ್ ಆಗುತ್ತಿದ್ದಂತೆ ಬಸವಂತರಾಯ್ ತಾನು ಬಳಸುತ್ತಿದ್ದ ರಿಜಿಸ್ಟರ್ ಆಗದ ಕಾರಿನ ಟೆಂಪರ್ವರಿ ಪಾಸಿಂಗ್ ದಾಖಲೆಯನ್ನ ನಕಲು ಮಾಡಿ ಕಾರು ಡಿಲೆವರಿ ಆಗಿದೆ ಎಂದು ಲೋನ್ ಪಡೆಯುತ್ತಿದ್ದ.
ಲೋನ್ ಪಡೆದು ಒಂದೆರೆಡು ತಿಂಗಳು ಕಂತು ಕೂಡ ಕಟ್ಟಿದ್ದಾರೆ. ಯಾವಾಗ ಬ್ಯಾಂಕ್‌ಗಳು ಕಾರಿನ ಆರ್ಸಿ ಬುಕ್ ಸೇರಿ ಕಾರ್ ತಂದು ತೋರಿಸುವಂತೆ ಒತ್ತಾಯ ಮಾಡಿದಾಗ ಕಂತು ಕಟ್ಟೋದನ್ನ ನಿಲ್ಲಿಸಿ ಬ್ಯಾಂಕ್‌ನತ್ತ ಸುಳಿಯುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಕಾರ್ ಶೋ ರೂಂಗೆ ಕರೆ ಮಾಡಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಲಬುರಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಸವಂತರಾಯ ಪಾಟೀಲ್‌ನನ್ನು ಬಂಧಿಸಿದ್ದಾರೆ. ಬಂಧಿಂತನಿಂದ ಮಹೇಂದ್ರ ರೆಕ್ಸ್ಟಾನ್, ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈತನ ಜೊತೆಗಿದ್ದ ಮೂವರು ಆರೋಪಿಗಳು ತೆಲೆಮರೆಸಿಕೊಂಡಿದ್ದು, ಮೂರು ಜನರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.