ಕಲಬುರಗಿ: ಕೊರೊನಾ ಮಹಾಮರಿ ಅಟ್ಟಹಾಸ ಮುಂದುವರೆಸಿದ್ದು, ಇಂದು ಮತ್ತೆ 22 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಜಿಲ್ಲೆಯಲ್ಲಿ ಒಟ್ಟು 1254 ಪಾಜಿಟಿವ್ ಕೇಸ್ ಗಳು ದಾಖಲಾಗಿವೆ.
ಕಂಟೋನಮೆಂಟ್ ಝೋನ್ ನಲ್ಲಿರುವ ಇಬ್ಬರು, ತೇಲಂಗಾಣದಿಂದ ಮರಳಿದ ಓರ್ವ ಹಾಗೂ ಮಹಾರಾಷ್ಟ್ರದಿಂದ ವಾಪಸ್ ಬಂದಿರುವ 13 ಜನರ ವರದಿ ಪಾಜಿಟಿವ್ ಆಗಿದೆ.
ಅದೇ ರೀತಿ ಇಂದು ಕೊರೊನಾದಿಂದ ಆಸ್ಪತ್ರೆಗೆ ದಾಖಲಾದ 50 ರೋಗಿಗಳ ವರಿದಿ ನೆಗಿಟೀವ್ ಆಗಿದ್ದು, ರೋಗಿಗಳು ಚಿಕಿತ್ಸೆಯಿಮದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 1254 ಪಾಜಿಟಿವ್ ಪ್ರಕರಣ, 829 ಕೊರೊನಾ ಪೀಡಿತರು ಚಿಕಿತ್ಸೆಯಿಂದ ಸಂಪೂರ್ಣ ಡಿಸ್ಚಾರ್ಜ್ ಆಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. 412 ಕೊರೊನಾ ರೋಗಿಗಳು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.