ವಾಡಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಕೊಠಡಿಗಳಿಗೆ ಸ್ಯಾನಿಟೈಸರ್: 800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ

0
89

ವಾಡಿ: ಪ್ರತಿ ವರ್ಷದಂತೆ ಸ್ಥಳೀಯ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಎರಡು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು ೮೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಇದೇ ಮೊದಲ ಸಲ ಮತ್ತೊಂದು ಖಾಸಗಿ ಶಾಲೆ ಬಳಕೆಗೆ ಮುಂದಾಗಿದ್ದು, ಪ್ರತಿಷ್ಠಿತ ಡಿಎವಿ ಪಬ್ಲಿಕ್ ಶಾಲೆಯಲ್ಲಿ ೧೫೦ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಿದ್ದಾರೆ.

Contact Your\'s Advertisement; 9902492681

ಎರಡೂ ಪರೀಕ್ಷಾ ಕೇಂದ್ರಗಳ ಉಸ್ತೂವಾರಿ ನೋಡಿಕೊಳ್ಳಲು ಬಿಆರ್‌ಪಿ ದತ್ತಪ್ಪಾ ಡೋಂಬಳೆ ಅವರನ್ನು ನೂಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಾದ ಮಹೇಶಕುಮಾರ ಬಡಿಗೇರ, ಚಂದ್ರಾಮ ಅಮನಘಡ, ಬಸಪ್ಪ ಮುಗಳಕೋಡ ಅವರು ಜೂ.೨೫ ರಂದು ಕೊಠಡಿ ಹುಡುಕಲು ವಿದ್ಯಾರ್ಥಿಗಳು ಪರದಾಡದಂತೆ ತಡೆಯಲು ಬುಧವಾರ ವಿದ್ಯಾರ್ಥಿಗಳನ್ನು ಕರೆಯಿಸಿ ಕೊಠಡಿಗಳ ಪರಿಚಯ ಮಾಡಿಸಿದರು.

ಪುರಸಭೆ ಸಿಬ್ಬಂದಿಗಳು ಪರೀಕ್ಷಾ ಕೇಂದ್ರ ಎಲ್ಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪರಣೆ ಮಾಡಿದರು. ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ತಮ್ಮ ತಮ್ಮ ಕೋಣೆಗಳಿಗೆ ಸೇರಲು ನೆಲದಡಿ ಗುರುತುಗಳನ್ನು ಹಾಕಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳ ಪ್ರವೇಶ ನೀಡಲಾಗುತ್ತದೆ. ಮಾಸ್ಕ್‌ಗಳನ್ನು ವಿತರಿಸಿ ಕೊರೊನಾ ಸುರಕ್ಷತೆ ಕಾಪಾಡಲಾಗುತ್ತಿದೆ. ನಕಲು ತಡೆಯಲು ಕೊಠಡಿಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಸಲಾಗಿದೆ. ಪರೀಕ್ಷಾರ್ಥಿಗಳು ಎರಡು ತಾಸು ಮೊದಲೇ ಆಗಮಿಸಲು ಸೂಚಿಸಲಾಗಿದೆ.

ಕೇಂದ್ರಗಳ ಸುತ್ತಲೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ನೂಡಲ್ ಅಧಿಕಾರಿ ದತ್ತಪ್ಪ ಡೋಂಬಳೆ ಪ್ರತಿಕ್ರೀಯಿಸಿದ್ದಾರೆ. ಹಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಶಿಕ್ಷಕರಾದ ಅಶೋಕ ಚಕ್ರವರ್ತಿ, ಪ್ರಕಾಶ ಅವರು ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here