ಸುಸೂತ್ರವಾಗಿ ನಡೆದ ಮೊದಲ ದಿನದ ಪರೀಕ್ಷೆ: ೩೪೭ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

0
18

ಸುರಪುರ: ಸರಕಾರದ ಆದೇಶದಂತೆ ನಡೆಸಲಾಗುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನದ ಪತ್ರಿಕೆ ಸುಸೂತ್ರವಾಗಿ ನಡೆಸಲಾಯಿತು.ಸುರಪುರ ಮತ್ತು ಹುಣಸಗಿ ತಾಲೂಕಿನ ಒಟ್ಟು ೨೧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾದರು.

ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ೧೫ ಮೂಲ ಕೇಂದಗಳ್ರು ಮತ್ತು ೬ ಉಪ ಕೇಂದ್ರಗಳು ಸೇರಿ ೨೧ ಕೇಂದ್ರಗಳಲ್ಲಿ ೫೨೧೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಬಯಸಿದ್ದರು. ಆದರೆ ೪೮೭೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೩೪೭ ವಿದ್ಯಾರ್ಥಿಗಳು ಗೈರಾಗಿದ್ದಾರೆ.

Contact Your\'s Advertisement; 9902492681


ರಂಗಂಪೇಟ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ೪ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ ಮಾಡಿದ್ದಾಗ ಜ್ವರ ಕಾಣಿಸಿಕೊಂಡು ಸ್ವಲ್ಪಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರ ಮದ್ಯೆಯೆ ಅಧಿಕಾರಿಗಳು ಜ್ವರ ಬಂದ ವಿದ್ಯಾರ್ಥಿಗಳ ಬಯಕೆಯಂತೆ ಔಷಧಿ ನೀಡಿ ಆರೈಕೆ ಮಾಡಿ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆಮಾಡಲಾಯಿತು. ಕಂಟೈನ್ಮೆಂಟ್ ಜೋನಿನಿಂದ ಬಂದ ೯೬ ವಿದ್ಯಾರ್ಥಿಗಳಿಗು ಕೂಡಾ ವಿಶೇಷ ಕೋಠಡಿಗಳನ್ನು ನಿರ್ಮಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.

ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಬಸ್‌ನ ವ್ಯವಸ್ಥೆ ಮಾಡಲಾಗಿತ್ತು. ಕರೊನಾ ಭಯದಲ್ಲೆ ಪರೀಕ್ಷೆ ಹೆದರಿಸಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಹೊರಗಡೆ ಸ್ಕ್ರೀನಿಂಗ್ ಮಾಡಿ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದ ನಂತರ ವಿದ್ಯಾರ್ಥಿಗಳು ಖುಷಿಯಲ್ಲಿ ಪರೀಕ್ಷಾ ಕೊಠಡಿಗೆ ತೆರಳಿದರು.
ಎರಡು ತಾಲೂಕಿನ ಎಲ್ಲಾ ಕೇಂದ್ರಗಳಲ್ಲಿ ಯಾವುದೇ ಪರೀಕ್ಷಾ ನಕಲು ಮತ್ತಿತರೆ ಅಕ್ರಮ ಚಟುವಟಿಕೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಒಟ್ಟಲ್ಲಿ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದು ಎಲ್ಲರಲ್ಲಿ ನೆಮ್ಮದಿ ಮೂಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here