ಕಲಬುರಗಿ: ಸೋಲರಿಯದ ಸರದಾರ ಮಲ್ಲಿಕಾರ್ಜನ ಖರ್ಗೆಗೆ ಹಿನ್ನಡೆಯಾಗಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದ್ದರೂ ಇನ್ನೂ 9 ಲಕ್ಷ ಮತಗಳ ಎಣಿ ಕಾರ್ಯ ನಡೆಯಬೇಕಾಗಿದೆ. ಆರಂಭದಿಂದಲ್ಲು ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ತಾತ್ಕಾಲಿಕ ಖುಷಿಯಲ್ಲಿದ್ದಾರೆ. ಎಲ್ಲಾ ಮತಗಳ ಎಣಿಕೆ ಆದಮೇಲೆಯೇ ಗೆಲುವು ಯಾರ ಮಡಿಲಿಗೆ ಎಂಬುದು ಗೊತ್ತಾಗಲಿದೆ.
ಗುರುಮಠಕಲ್ ಕಲಬುರಗಿ ಉತ್ತರದ ಮೇಲೆ ಎಲ್ಲರ ಕಣ್ಣಿದೆ. ಉತ್ತರದಲ್ಲಿ ಕಳೆದ ಬಾರಿ 27 ಸಾವಿರ ಮತಗಳು ಕಾಂಗ್ರೆಸ್ ಗೆ ಲೀಡ್ ನೀಡಿತ್ತು. ಗುರುಮಠಕಲ್ 37 ಸಾವಿರ ಕಾಂಗ್ರೆಸ್ ಗೆ ಲೀಡ್ ಬಂದಿತ್ತು.
ಕಲಬುರಗಿ- ಮೊದಲ ಸುತ್ತಿನ ಮತ ಮತ ಎಣಿಕೆ ಕಾರ್ಯ ಮುಕ್ತಾಯದ ನಂತರ ಕ್ಷೇತ್ರವಾರು ಚಲಾವಣೆಯಾದ ಮತಗಳು. ಹೀಗಿವೆ ಗುರುಮಠಕಲ್ ಬಿಜೆಪಿಗೆ 4171 ಮತಗಳು ಬಿದ್ದರೆ, ಕಾಂಗ್ರೆಸ್ಗೆ 2857.
ಅಫಜಲಪುರ ಬಿಜೆಪಿಗೆ 5519 ಕಾಂಗ್ರೆಸ್ಸಿಗೆ 2339, ಜೇವರ್ಗಿ ಬಿಜೆಪಿಗೆ 4085 ಕಾಂಗ್ರೆಸ್ 2740,
ಚಿತ್ತಾಪುರ ಬಿಜೆಪಿಗೆ 4863 ಕಾಂಗ್ರೆಸ್ 3504, ಸೇಡಂ ಬಿಜೆಪಿಗೆ 3183 ಕಾಂಗ್ರೆಸ್ 3951
ಗುಲ್ಬರ್ಗ ಗ್ರಾಮೀಣ ಬಿಜೆಪಿಗೆ 4514, ಕಾಂಗ್ರೆಸ್ 2338, ಗುಲ್ಬರ್ಗ ದಕ್ಷಿಣ ಬಿಜೆಪಿಗೆ 4758, ಕಾಂಗ್ರೆಸ್ 4004,
ಗುಲ್ಬರ್ಗ ಉತ್ತರ ಬಿಜೆಪಿಗೆ 4447, ಕಾಂಗ್ರೆಸ್ 4030. ಇನ್ನು 9 ಲಕ್ಷಗಳ ಮತ ಎಣಿಕೆ ಇರುವುದರಿಂದ ಫಲಿತಾಂಶ ಈಗಲೇ ಹೇಳೊದಕ್ಕೆ ಆಗುವುದಿಲ್ಲ.