ನಾಲ್ವರು ಚಾಲಕರಲ್ಲಿ ಕಾಣಿಸಿದ ಕೊರೊನಾ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೆ ಕರಿನೆರಳು

0
38

ಸುರಪುರ: ಇಲ್ಲಿಯವರೆಗೆ ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ವೈರಸ್ ಈಗ ಸುರಪುರ ಜನರಲ್ಲಿ ಹರಡಲು ಶುರುವಾಗಿದೆ.ಕಳೆದ ಕೆಲ ದಿನಗಳ ಹಿಂದೆ ಆಶಾ ಕಾರ್ಯಕರ್ತೆಯರು ಮತ್ತು ಬಸ್ ಚಾಲಕ ಹಾಗು ನರ್ಸ್ ಒಬ್ಬರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿತ್ತು.ಅದರ ಮುಂದುವರೆದ ಭಾಗವಾಗಿ ಈಗ ಚಾಲಕರಲ್ಲಿ ಹೆಚ್ಚುತ್ತಿದ್ದು ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.

ಸುರಪುರ ಬಸ್ ಡಿಪೋದ ನಾಲ್ವರು ಚಾಲಕರಲ್ಲಿ ಕೊರೊನ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಿಂದ ಇಡೀ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಭೀತಿ ಮನೆ ಮಾಡಿದೆ.ಈಗಾಗಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಂಡಿದ್ದು ಎರಡು ತಾಲೂಕಿನ ಗ್ರಾಮೀಣ ಭಾಗದಿಂದ ಶೇ ೭೦ ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಬರಲಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕರೆತರಲು ಬಸ್‌ಗಳನ್ನು ಪ್ರತಿ ಗ್ರಾಮಗಳಿಗೆ ಬಿಡಲಾಗುತ್ತಿದ್ದು,ಈ ಬಸ್‌ಗಳಿಗೆ ಹೋಗುವ ಚಾಲಕರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

Contact Your\'s Advertisement; 9902492681

ಸದ್ಯ ನಾಲ್ವರು ಚಾಲಕರಲ್ಲಿ ಕಾಣಿಸಿಕೊಂಡಿರುವ ಸೊಂಕು ಇವರು ಯಾರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆ ಹಚ್ಚಲು ಸಮಯ ಬೇಕಿದೆ.ಇದರ ಮದ್ಯೆ ಪರೀಕ್ಷೆಗೆ ಮಕ್ಕಳ ಕರೆತರಲು ಹೋದವರಲ್ಲಿ ಪಾಸಿಟಿವ್ ಇದ್ದರೆ ಗತಿ ಏನು ಎಂಬುದು ಕೂಡ ಜನರ ಚಿಂತೆಗೀಡು ಮಾಡಿದೆ.ಅಲ್ಲದೆ ಸುರಪುರ ಬಸ್ ಡಿಪೋದಿಂದ ಗ್ರಾಮೀಣ ಭಾಗ ಮತ್ತು ಬೆಂಗಳೂರು ಮತ್ತಿತರೆಡೆಗೆ ಹೋಗುವ ಬಸ್‌ಗಳಿಗೆ ಯಾವ ಚಾಲಕ ನಿರ್ವಾಹಕರನ್ನು ಕಳುಹಿಸುವುದು ಎಂಬುದುಕೂಡ ದೊಡ್ಡ ಪ್ರಶ್ನೆಯಾಗಿದೆ.ಆದರೆ ನಾಲ್ವರಲ್ಲಿ ಸೊಂಕು ಕಾಣಿಸಿಕೊಂಡರು ಬಸ್ ಡಿಪೋವನ್ನು ಸೀಲ್‌ಡೌನ್ ಮಾಡುವುದಿಲ್ಲವೆಂದು ಕೆಎಸ್‌ಆರ್‌ಟಿಸಿ ಯಾದಗಿರಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸುತ್ತಿದ್ದಾರೆ.

ಕೇವಲ ನಾಲ್ವರು ಬಸ್ ಚಾಲಕರು ಮಾತ್ರವಲ್ಲದೆ ಹುಣಸಗಿ ಪಟ್ಟಣದ ಒಬ್ಬ ಶಿಕ್ಷಕನಲ್ಲು ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಮತ್ತಿಷ್ಟು ಆತಂಕ ಹೆಚ್ಚಿದೆ.ಈ ಎಲ್ಲದರ ಮದ್ಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹೇಗೆ ಮುಂದುವರೆಯುತ್ತವೆ ಎಂಬುದು ಜನರಲ್ಲಿ ಕುತೂಹಲದ ಪ್ರಶ್ನೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here