ಚಿಂಚೋಳಿ: ಮೊಟ್ಟ ಮೊದಲು ಭಾರತ ದೇಶದಲ್ಲಿ ಮೀಸಲಾತಿಯ ಪರಿಕಲ್ಪನೆ ಹುಟ್ಟಿ ಹಾಕಿದ್ದು ಅಕ್ಷರಧಾತ ಮಾಹತ್ಮ ಜ್ಯೊತಿಭಾಪುಲೆಯವರು ಅದನ್ನು ಜಾರಿಗೆ ತಂದು ಮೀಸಲಾತಿಯ ಹರಿಕಾರರೆಂದೆ ಪ್ರಸಿದ್ದಿಯಾದವರು ಶಾಹು ಮಾಹರಾಜರೆಂದು ಭಾಮಸೆಪ್ ರಾಜ್ಯಾಧ್ಯಕ್ಷರಾದ ಪ್ರೊ,ಸುಭಾಷ ಶೀಲವಂತರವರು ಪಟ್ಟಣದ ಚಂದಾಪುರದಲ್ಲಿ ಶಾಹು ಮಾಹರಾಜರ 146 ನೇ ಜಯಂತೋತ್ಸವ ಆಚರಣೆಯೊಂದಿಗೆ ಭಾಮಸೆಫ್ ಭಾರತ ಮುಕ್ತಿ ಮೊರ್ಚಾ ಹಾಗೂ ಭಾರತೀಯ ವಿದ್ಯಾರ್ಥಿ ಮೊರ್ಚಾದ ಕಾರ್ಯಾಲಯ ಉದ್ಘಾಟನೆಯ ನಂತರ ಉಪನ್ಯಾಸ ನೀಡುತ್ತಾ ಮುಂದುವರೆದು.
ಸಮಾಜದಲ್ಲಿ ತುಳಿತಕ್ಕೂಳಗಾದವರಿಗೆ ಬಲಹೀನರಿಗೆ,ನಿರ್ಗತಿಕರಿಗೆ,ಮಹಿಳೆಯರಿಗೆ,ರೈತರಿಗೆ, ಸಾಮಾಜಿಕ ನ್ಯಾಯ ಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಆದ್ದರಿಂದ ಅವರಂತಹ ಅನೇಕ ಮಾಹಪುರುಷರ ವಿಚಾರಧಾರೆಗಳು ಇಂದಿನ ಯುವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಅಗತ್ಯವಾಗಿದೆಯೆಂದು ಸುದಿರ್ಘವಾಗಿ ಮಾತನಾಡಿದರು.
ಹಿರಿಯ ಸಾಹಿತಿ ಎಸ್,ಎನ್, ದಂಡಿನಕುಮಾರ, ದಲಿತ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ,ಲಕ್ಮಣ ಆವುಂಟಿ,ಆರ್,ಗಣಪತರಾವ,ಸುಧಾಕರಡ್ಡಿ ಪಾಟೀಲ್,ಶ್ರೀಮಂತ್ ಕಟ್ಟಿಮನಿ,ಅಮರ ಲೊಡ್ಡನೂರ್,ಕೆ,ಎಮ್ ಬಾರಿ ಮಾತನಾಡಿದರು ಕಾರ್ಯಕ್ರಮದಲ್ಲಿ ಶಾಮರಾವ್ ಕೊರವಿ,ಚಿತ್ರಶೇಖರ ಪಾಟೀಲ್,ಬೀಮಶೇಟ್ಟಿ ಮುರುಡಾ,ಅಬ್ದುಲ್ ಭಾಷಿದ್,ಸಿದ್ದಪ್ಪ ಪೂಜಾರಿ,ಆನಂದ ಟೈಗರ್,ಪ್ರೋಫೆಸರ್ ಶೌಕತಲಿ,ಶಾಂತಪ್ಪ ಶೀಲ್ಡ್,ಕೈಲಾಸ ಜ್ಯೊತಿ,ಸಂತೋಷ ಗುತ್ತಿಗೆದಾರ್,ಉಲ್ಲಾಸ ಕೆರೊಳ್ಳಿ,ಗುರು ವಜ್ರಗಾಂವ್,ಪಂಡರಿ ಲೊಡ್ಡನೂರ್,ಮಚ್ಚೆಂದ್ರ ಶೇರಿಕಾರ್,ಉಮೇಶ ದೋಟಿಕೋಳ ಕಾಶಿರಾಯ ದೇಗಲ್ಮಡಿ,ಗೋಪಾಲ ಗಾರಂಪಳ್ಳಿ ಮೌನೇಶ್ ಗಾರಂಪಳ್ಳಿ ಮಾರುತಿ ಗಂಜಗಿರಿ ಉಪಸ್ಥಿತರಿದ್ದರು.