ಕಲಬುರಗಿ: ವೈಯಕ್ತಿಕ ಕಾರಣಕ್ಕೆ ಮನನೊಂದು ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾ ಮ್ಯಾನ್ ಓರ್ವರು ಇಲ್ಲಿನ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಪೂರ್ವಾಹ್ನ ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ತನಸನಹಳ್ಳಿ ಗ್ರಾಮದ ನಿವಾಸಿ ಹಣಮಂತರಾವು ಎಸ್.ಡಿ (42) ಆತ್ಮಹತ್ಯೆಗೆ ಶರಣಾದ ದುರ್ದೈವಿ, ಇಂದು ಪೂರ್ವಹ್ನ ಪಿಡಿಎ ಇಂಜಿನಿಯರಿಂಗ್ ಕಾಲೇಜ ಹತ್ತಿರ ರಿಂಗ್ ರೋಡ್ ಓರ್ವರ್ ಬ್ರೀಜ್ ಬಳಿ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಮಂತ ಅವರು ಈ ಹಿಂದೆ ಖಾಸಗಿ ಸುದ್ದಿವಾಹಿನಿ ಟಿವಿ9 ಸೇವೆ ಸಲ್ಲಿಸಿದರು ಎಂದು ತಿಳಿದುಬಂದು ಸದ್ಯ ಬೆಂಗಳೂರು ಮೂಲದ ನೂತನ ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವಾಹಿನಿಯ ಗುರುತಿನ ಚೀಟಿ ಮೂಲಕ ಗುರುತಿಸಲಾಗಿದೆ.
ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿರುವುದಿಲ್ಲ, ವೈಯಕ್ತಿಕ ಕಾರಣದಿಂದಲ್ಲೆ ಆತ್ಮಹತ್ಯೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.