ಸಿಯುಕೆಯಲ್ಲಿ ಕನ್ನಡ ಭಾಷಾ ತರಬೇತಿ ಶಿಬಿರ ಉದ್ಘಾಟನೆ

0
76

ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಕನ್ನಡ ವಿಭಾಗದ ವತಿಯಿಂದ ಇಂದು ಆರಂಭವಾದ ಮೂರು ವಾರಗಳ ಕನ್ನಡ ಭಾಷಾತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಚ್.ಎಂ. ಮಹೇಶ್ವರಯ್ಯಅವರುಉದ್ಘಾಟನೆ ಮಾಡಿದರು.

ಭಾರತದ ಬೇರೆ ಬೇರೆ ರಾಜ್ಯಗಳಿಂದ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವಕನ್ನಡೇತರ ಪ್ರಾಧ್ಯಾಪಕರಿಗೆಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿಗಳು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಅನ್ಯ ಭಾಷಿಕ ಪ್ರಾಧ್ಯಾಪಕರಿಗೆಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿಕನ್ನಡ ಭಾಷಾ ಕಲಿಕ ಶಿಬಿರವನ್ನುಕನ್ನಡ ವಿಭಾಗ ಆರಂಭಿಸಿರುವುದು ಬಹಳ ಸಂತೋಷದ ವಿಷಯ.

Contact Your\'s Advertisement; 9902492681

ಅನ್ಯ ಭಾಷೆಯ ಪ್ರಾಧ್ಯಾಪಕರಿಗೆ, ಕನ್ನಡ ಭಾಷೆಯಜೊತೆಗೆಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಚರಿತ್ರೆಯ ಮಹತ್ವವನ್ನು ತಿಳಿಸಿಕೊಡುವುದು ಈ ಶಿಬಿರದ ಮುಖ್ಯಉದ್ದೇಶವಾಗಿದೆ.ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವುಕನ್ನಡ ಭಾಷಾಕಲಿಕೆಯಆರು ತಿಂಗಳ ಕೋಸರ್್ ಮತ್ತುಒಂದು ವರ್ಷದಡಿಪ್ಲೊಮೊ ತರಗತಿಗಳನ್ನು ಅಧಿಕೃತವಾಗಿಆರಂಭಿಸಲಿದೆ.ಅನ್ಯಭಾಷೆಯ ಪ್ರಾಧ್ಯಾಪಕರಜೊತೆಗೆ ವಿದ್ಯಾರ್ಥಿಗಳು, ಸಂಶೋಧಕರಿಗು ಸಹಾ ಕನ್ನಡ ಭಾಷಾಕಲಿಕೆಯಅವಕಾಶವನ್ನು ವಿಸ್ತರಿಸಲಾಗುವುದು. ವಿದೇಶಿ ಭಾಷಾಅಧ್ಯಯನಕೇಂದ್ರದ ಮೂಲಕ ಈಗಾಗಲೇ ಸ್ಪ್ಯಾನಿಷ್, ಜರ್ಮನ್, ಜಪಾನೀಸ್ ಮತ್ತು ಅರೆಬಿಕ್ ಭಾಷೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸ್ಥಳೀಯ ಆಸಕ್ತರಿಗೂ ಸಹಾ ಈ ಎಲ್ಲಾ ಭಾಷೆಗಳನ್ನು ಕಲಿಯುವಅವಕಾಶವನ್ನುಕಲ್ಪಿಸಲಾಗುವುದು.ಕನ್ನಡ ಭಾಷೆಯಜೊತೆಗೆ ಭಾರತೀಯ, ಪಾಶ್ಚಾತ್ಯ ಭಾಷೆಗಳ ಸಂಪರ್ಕವನ್ನು ಬೆಸೆಯುವ ಮೂಲಕ ಪರಸ್ಪರ ಸಾಹಿತ್ಯ, ಸಂಸ್ಕೃತಿ, ಚಿಂತನೆಗಳ ಕೊಳುಕೊಡುಗೆಯ ಕೇಂದ್ರವನ್ನಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವನ್ನುರೂಪಿಸುವುದು; ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನುಜಾಗತಿಕ ಮಟ್ಟಕ್ಕೆಕೊಂಡೊಯ್ಯುವುದು ಹಾಗೂ ಆರೋಗ್ಯಕರವಾದ ಬೌದ್ಧಿಕ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಜ್ಞಾನದ ವಲಯವನ್ನು ವಿಸ್ತರಿಸುವುದು ವಿಶ್ವವಿದ್ಯಾಲಯದ ಮುಖ್ಯಧ್ಯೇಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಪ್ರೊ.ಜಿ.ಆರ್. ನಾಯಕರ್ಅವರು ಮಾತನಾಡುತ್ತ ಕನರ್ಾಟಕವು ಶ್ರೀಮಂತವಾದ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಒಳಗೊಂಡಿದೆ.ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವಕನ್ನಡ ಭಾಷೆಯು ಭಾರತೀಯ ಬಾಷೆಗಳಲ್ಲಿ ಪ್ರಮುಖ ಭಾಷೆಯಾಗಿದೆ.ಕನ್ನಡೇತರರಿಗೆಕನ್ನಡ ಭಾಷೆಯನ್ನು ಕಲಿಸುವ ಮೂಲಕ ಇಲ್ಲಿನ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗೆಗೆ ಅರಿವನ್ನು ಮೂಡಿಸುವುದು ಬಹಳ ಮುಖ್ಯ.ಅನ್ಯ ಭಾಷೆಯ ಪ್ರಾಧ್ಯಾಪಕರು, ವಿದ್ಯಾಥರ್ಿಗಳು ಕನ್ನಡ ಭಾಷೆಯನ್ನುಕಲಿಯುವುದರಿಂದಇಲ್ಲಿನ ಸ್ಥಳೀಯರ ಜೊತೆಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲಿಕ್ಕೆ ಸಾಧ್ಯ.ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗೆಗೆ ಅರಿವನ್ನು ಮೂಡಿಸಿಕೊಳ್ಳಲು ಅನುಕೂಲವಾಗುತ್ತದೆ.ನಮ್ಮ ವಿಶ್ವವಿದ್ಯಾಲಯಕ್ಕೆಬರುವ ಹೆಚ್ಚಿನ ಸಂಖ್ಯೆಯ ವಿದ್ಯಾಥರ್ಿಗಳು, ನೌಕರರುಕನ್ನಡಿಗರಾಗಿರುವುದರಿಂದಅವರೊಟ್ಟಿಗೆಒಡನಾಡಲುಕನ್ನಡ ಭಾಷೆ ಬಹಳ ಮುಖ್ಯ.ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಅನ್ಯ ಭಾಷಾ ಪ್ರಾಧ್ಯಾಪಕರು, ವಿದ್ಯಾಥರ್ಿಗಳು ಕನ್ನಡ ಭಾಷಾ ಕಲಿಕ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಬಸವರಾಜ ಪಿ.ಡೋಣೂರ್ಅವರು ಪ್ರಾಸ್ತಾವಿಕವಾಗಿ’ಕನ್ನಡ ಭಾಷಾ ಕಲಿಕ ಶಿಬಿರ’ದ ಮಹತ್ವವನ್ನುಕುರಿತು ಮಾತನಾಡಿದರು.ಜೊತೆಗೆಉದ್ಘಾಟನ ಸಮಾರಂಭದತರುವಾಯಆರಂಭವಾದ ಮೊದಲ ತರಗತಿಯಲ್ಲಿ ಕರ್ನಾಟಕ ಪರಂಪರೆಯನ್ನು ಕುರಿತು ಉಪನ್ಯಾಸ ನೀಡಿದರು.

ಉದ್ಘಾಟನ ಸಮಾರಂಭದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವಿಕ್ರಮ ವಿಸಾಜಿ, ಶಿಬಿರದ ಸಂಚಾಲಕರಾದಡಾ.ಅಪ್ಪಗೆರೆ ಸೋಮಶೇಖರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here