ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಶಹಾಬಾದನಲ್ಲಿ ಇಂದು ಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಶಹಾಬಾದ:ಕಾಪರ್ೋರೇಟ್ ಕೃಷಿಯನ್ನು ಹಿಮ್ಮೆಟ್ಟಿಸಿ-ರೈತಾಪಿ ಕೃಷಿಯನ್ನು ರಕ್ಷಿಸಿ. ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಸೋಮವಾರ ಹೊನಗುಂಟಾ ಗ್ರಾಮ ಪಂಚಾಯತಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು, ಈ ಭಯಾನಕ ರೋಗ ಹಾಗೂ ಲಾಕ್ಡೌನ್ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಇಡೀ ದೇಶದ ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಹಲವು ಕಾನೂನು ತಿದ್ದುಪಡಿಗಳು, ಕಾನೂನುಗಳನ್ನು ಮಾಡುತ್ತಿವೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ಸಂಸತ್ನಲ್ಲಿ ಹಾಗೂ ವಿಧಾನ ಮಂಡಲಗಳಲ್ಲಿ ಯಾವೂದೇ ಚರ್ಚೆ ಸಹ ನಡೆಸದೇ ಎಲ್ಲವನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿ ಮಾಡುತ್ತಿವೆ ಎಂದು ದೂರಿದರು.
ಸಾಮ್ರಾಜ್ಯ ಶಾಹಿಗಳು, ಕಾಪರ್ೋರೇಟ್ ಕಂಪನಿಗಳ ಗುಲಾಮರಾಗಿರುವ ಸರ್ಕಾರಗಳು, ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣಾ ಕಸುಬುದಾರರನ್ನು ಈ ಶಕ್ತಿಗಳಿಗೆ ಗುಲಾಮರನ್ನಾಗಿ ಮಾಡಲು ಎಪಿಎಂಸಿ ಕಾಯ್ದೆ ತಿದ್ದುಪಡ್ಡಿಯನ್ನು ಮಾಡಿ, ಸಕರ್ಾರದ ನಿಯಂತ್ರಿತ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ನಾಶಮಾಡಿ, ಯಾವುದೇ ನಿಯಂತ್ರವಿಲ್ಲದೆ ಕಾಪರ್ೋರೇಟ್ ಕಂಪನಿಗಳು ಇನ್ನು ಮುಂದೆ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ, ಯಾವ ದರಕ್ಕೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಕೊಟ್ಟಿವೆ. ಈ ಮೂರು ಸುಗ್ರೀವಾಜ್ಞೆಗಳು ಮತ್ತು ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ದೇಶದ ರೈತರನ್ನು ಲೂಟಿ ಮಾಡಲು ಜಗತ್ತಿನ ಕಾಪೋರೇಟ್ ಕಂಪನಿಗೆ ಮುಕ್ತ ಅವಕಾಶ ಒದಗಿಸಿಕೊಟ್ಟ ಕರಾಳ ದಿನ ವಾಗಿದೆ.ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ತಾಲೂಕಿನ ಹೊನಗುಂಟಾ,ತೊನಸನಹಳ್ಳಿ,ಭಂಕೂರ ಈ ಮೂರು ಗ್ರಾಮಪಂಚಾಯಿತಿ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ಗಣಪತ್ರಾವ್.ಕೆ.ಮಾನೆ,ತಾಲೂಕ ಅಧ್ಯಕ್ಷ ಮಾಹದೇವ ಸ್ವಾಮಿ, ಕಾರ್ಯದರ್ಶಿ ರ್ರಾಜೇಂದ್ರ ಅತನೂರು, ಸದಸ್ಯರಾದ ಚಂದ್ರು ಮರಗೊಳ, ಸಾಯಿಬಣ್ಣ ನಾಟೆಕಾರ್,ಬಸಲಿಂಗಪ್ಪ ಪೂಜಾರಿ,ದತ್ತು ಪೂಜಾರಿ, ಮರೆಪ್ಪಾ ಹೊನಗುಂಟ ಇದ್ದರು.