ಸುರಪುರ: ತಾಲೂಕಿನ ತಿಂಥಣಿ ಬಳಿಯ ಕೃಷ್ಣಾ ನದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬ್ರೀಜ್ ಕಮ್ ಬ್ಯಾರೆಜ್ ನಿರ್ಮಾಣ ಸ್ಥಳವನ್ನು ನೀರಾವರಿ ಸಚಿವ ರಮೇಶ ಜಾರಕಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ,ಕೃಷ್ಣಾ ನದಿಯಲ್ಲಿ ಬ್ರೀಜ್ ಕಮ್ ಬ್ಯಾರೆಜ್ ನಿರ್ಮಾಣದ ಕುರಿತು ಹಿಂದೆ ಬಜೆಟ್‌ನಲ್ಲಿಯೆ ಘೋಷಿಸಲಾಗಿದೆ.ಅದರಂತೆ ಈಗ ಸ್ಥಳ ಪರಿಶೀಲನೆ ನಡೆಸಳಾಗುತ್ತಿದ್ದು,ಎರಡು ಮೂರು ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ.ಸೂಕ್ತ ಸ್ಥಳದಲ್ಲಿ ಸುಮಾರು ೩೦೦ ಕೋಟಿ ಅಂದಾಜು ವೆಚ್ಚದಲ್ಲಿ ಬ್ರೀಜ್ ಕಮ್ ಬ್ಯಾರೆಜ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಸುರಪುರ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರಕ್ಕಾಗಿ ಬಹುದಿನಗಳ ಕನಸಿದೆ.ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೂ ಮನವರಿಕೆ ಮಾಡಿ ಕಾಮಗಾರಿ ಅನುಮೋದನೆಗೊಳಿಸಲಾಗಿದ್ದು ಈಗ ಸ್ಥಳ ಪರಿಶೀಲನೆ ಕಾರ್ಯ ಆರಂಭವಾಗಿದ್ದು ಸಚಿವ ರಮೇಶ ಜಾರಕಿಹೊಳೆಯವರು ಹೇಳಿದಂತೆ ಆದಷ್ಟು ಶೀಘ್ರವೆ ಕಾಮಗಾರಿ ನಿರ್ಮಾಣಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ರೀಜ್ ಕಮ್ ಬ್ಯಾರೇಜ್ ಕುರಿತು ನಿರ್ಮಿಸಲಾದ ನೀಲ ನಕ್ಷೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ,ರಾಯಚೂರು ಶಾಸಕ ಶಿವರಾಜ ಪಾಟೀಲ್,ಮಸ್ಕಿಯ ಪ್ರತಾಪಗೌಡ ಪಾಟೀಲ,ಮಾನಪ್ಪ ವಜ್ಜಲ್ ಸೇರಿದಂತೆ ಅನೇಕ ಮುಖಂಡರುಗಳಿದ್ದರು.