ಸುರಪುರ: ನಗರಕ್ಕೆ ಆಗಮಿಸಿದ್ದ ನೀರಾವರಿ ಸಚಿವ ರಮೇಶ ಜಾರಕೊಹೊಳೆಯವರಿಗೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬ್ರೀಜ್ ಕಮ್ ಬ್ಯಾರೇಜ್ ನಿರ್ಮಿಸಿ ಸುರರಪುರ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗು ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ದೊರೆಯುವಂತೆ ಮಾಡಬೇಕು ಮತ್ತು ಕೃಷ್ಣಾ ಎಡದಂಡೆ ಕಾಲುವೆಗಳು ಹೊಡೆದಿದ್ದು ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.