ಬಳ್ಳಾರಿ ನಂತರ ಇದೀಗ ಯಾದಗಿರಿ ಜಿಲ್ಲೆಯಲ್ಲೂ ಅಮಾನವೀಯ ಘಟನೆ:  ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಶವ ಎಳೆದುದೊಯ್ದು ಅಂತ್ಯಸಂಸ್ಕಾರ

0
100

ಯಾದಗಿರಿ: ಮಹಾಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ದರದರನೆ ಎಳೆದೊಯ್ದು ಅಂತಿಮ ಸಂಸ್ಕಾರ‌ ನಡೆಸಿರುವ ಘಟನೆ ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಕೋವಿಡ್ ಸೋಂಕಿತ ವ್ಯಕ್ತಿಯ ಮೃತದೇಹವನ್ನ ಆರೋಗ್ಯ ಇಲಾಖೆ ಸಿಬ್ಬಂದಿಯು ಆ್ಯಂಬುಲೆನ್ಸ್​ನಿಂದ ಎಳೆದುತಂದು ಶವದ ಗುಂಡಿಯಲ್ಲಿ ಎಸೆದಿರುವ ವಿಡಿಯೋ ಇದೀಗಸಮಾಜಿಕ ಜಾಲಾತಾಣದಲ್ಲಿ ಸಖತ್  ವೈರಲ್​ ಆಗಿದ್ದು, ಬಳ್ಳಾರಿ, ದಾವಣಗೆರೆ ಬಳಿಕ ಯಾದಗಿರಿಯಲ್ಲೂ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ರಾಯಚೂರಿನ ಸಿರವಾರದಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಮಗಳ ಮದುವೆ ಮರುದಿನವೇ ಮೃತಪಟ್ಟಿದ್ದರು. ಮೃತನ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹುಟ್ಟೂರು ಹೊನಗೇರಾದಲ್ಲಿ ಅಂತ್ಯ ಸಂಸ್ಕಾರ ಮಾಡಲು ಆತನ ಕುಟುಂಬ ನಿರ್ಧರಿಸಿದ್ದ ಹಿನ್ನೆಲೆ ಶವವನ್ನು ಸ್ವಗ್ರಾಮಕ್ಕೆ ತರಲಾಗಿತ್ತು. ಮಕ್ಕಳು, ಹೆಂಡತಿ ಅನುಪಸ್ಥಿತಿಯಲ್ಲೇ ನಡೆದಿದ್ದ ಅಂತಿಮ ಸಂಸ್ಕಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ಸಿಬ್ಬಂದಿ ನಡೆದುಕೊಂಡಿದ್ದು, ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.

ಘಟನೆ ಕುರಿತು ಜಿಲ್ಲಾಡಳಿತದಿಂದ ಸದ್ಯಯಾವುದೇ ಪ್ರತಿಕ್ರೀಯೆ ವ್ಯಕ್ತವಾಗಿಲ್ಲ. ಸಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೀಕ್ಷಿಸಿ ನೆಟ್ಟಿಗರು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here