ಕಲಬುರಗಿ: ಆಸ್ತಿ ವಿಚಾರವಾಗಿ ರೈತ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಲ್ಲಿನ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭಾಗಿರಥಿ ಹತ್ತಿರ ಕಚ್ಚಾ ದಾರಿಯಲ್ಲಿ ಇಂದು ನಡೆದಿದೆ.
ಗಣಗಾಪುರ ನಿವಾಸಿಯಾಗಿರುವ ದತ್ತಾತ್ರೇಯ ಮಹಾದೇವ ಕೊಲ್ಲೊರು (35) ಕೊಲೆಯಾದ ರೈತರ, ದತ್ತಾತ್ರೇಯ ಅವರು ಇತ್ತೀಚಿಗೆ ಆಸ್ತಿ ಖರೀದಿ ಮಾಡಿದ್ದು, ಈ ಆಸ್ತಿ ವಿಚಾರವಾಗಿ ಈ ಹಿಂದೆ ಮತ್ತೊಂದು ಕೊಲೆ ನಡೆಸಿದ ಆರೋಪಿ ಮೃತ ದತ್ತಾತ್ರೇಯ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಆರೋಪಿ ಸಿದ್ದಪ್ಪ ಲಿಂಗಪ್ಪ ಪೂಜಾರಿ ಈ ಹಿಂದೆ ಒಂದು ಕೊಲೆ ಮಾಡಿ ಸೆರೆವಾಸ, ಅನುಭವಿಸಿ ಗ್ರಾಮ್ಕೆಕ ಮರಳಿದ. ಆರೋಪಿ ಸಿದ್ದಪ್ಪ ಅವರ ತಂದೆ ತನ್ನ ಆಸ್ತಿಯನ್ನು ಇನ್ನೊಬ್ಬರಿಗೆ ಮಾರಿದರು. ಆಸ್ತಿ ಖರೀದಿಸಿದ ವ್ಯಕ್ತಿ ದತ್ತಾತ್ರೇಯಗೆ ಮಾರಿದ್ದು, ಈ ಹಿಂದೆ ಸಿದ್ದಪ್ಪ ತನ್ನ ಅಪ್ಪನಿಂದ ಆಸ್ತಿ ಖರೀದಿಸಿದ ವ್ಯಕ್ತಿಯ ಕೊಲೆ ಮಾಡಿ ಜೈಲು ಸೇರಿದ ಎಂದು ತಿಳಿದುಬಂದಿದೆ.
ದತ್ತಾತ್ರೇಯ ಅವರಿಗೆ ಮಾರಿರುವ ಆಸ್ತಿಯನ್ನು ಮರಳಿ ಪಡೆಯಲು ಈ ಕೃತ್ಯ ನಡೆಸಿ ಅಮಾನುಷ್ಯವಾಗಿ ರೈತ ಓರ್ವನ ಪ್ರಾಣತೆಗೆದು ದುಷ್ಟಕೃತ್ಯ ವೇಸಗಿ ಪರಾರಿಯಾಗಿದ್ದಾನೆ. .
ಮೃತ ದತ್ತಾತ್ತೇಯ ಅವರಿಗೆ ಮೂವರು ಮಕ್ಕಳಿದು, ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದರು ಎಂದು ತಿಳಿದುಬಂದಿಎ. ತನ್ನ ಜಮೀನಿಗೆ ತರಳುತ್ತಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸಿದ್ದಪ್ಪ ಬಂಧನಕ್ಕೆ ಜಾಲಾ ಬಿಸಿದ್ದಾರೆ.