ಉಚಿತ ಕಾನೂನು ಸಲಹಾ ಕೇಂದ್ರಕ್ಕೆ, ವಕೀಲರಾದ ಟಿ.ನಾಗೇಂದ್ರ ನೇಮಕ

0
152

ಶಹಾಪುರ : ನಾಗರಿಕರ ಹಿತದೃಷ್ಟಿಯಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಸದುದ್ದೇಶದಿಂದ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಕಾನೂನು ಸಲಹಾ ಕೇಂದ್ರವನ್ನು ಇಂದು ಸ್ಥಾಪಿಸಲಾಯಿತು.

ಕಾನೂನು ಅರಿವು ನೆರವು ಮತ್ತು ಸಲಹೆ ನೀಡಲು ವಕೀಲರಾದ ಟಿ ನಾಗೇಂದ್ರ ಅವರನ್ನು ನೇಮಿಸಲಾಗಿದೆ ಎಂದು ಶಹಾಪುರ ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎಸ್.ರಾಂಪುರೆ ತಿಳಿಸಿದರು.

Contact Your\'s Advertisement; 9902492681

ಗ್ರಾಮೀಣ ಭಾಗದಿಂದ ತಮಗಾದ ಅನ್ಯಾಯದ ಕುರಿತು ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳುವ ಉದ್ದೇಶದಿಂದ ಈ ಕೇಂದ್ರ ತೆರೆಯಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here