ಕಲಬುರಗಿ ಬಡಾವಣೆಯ ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಆಯುಕ್ತರಿಗೆ ಮನವಿ

0
66

ಕಲಬುರಗಿ: ವಿದ್ಯಾನಗರದ ಶ್ರೀ ಮ್ಲಲಿಕಾರ್ಜುನ ತರುಣ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಸೇಡಂ ರಸ್ತೆ ವಿದ್ಯಾನಗರದಲ್ಲಿ ಹಂದಿಗಳ ಉಪಟಳ ಹತ್ತಿಕ್ಕಲು ಮತ್ತು ಕಾಲೋನಿಯ ಮುಖ್ಯ ರಸ್ತೆ ಅಕ್ಕ-ಪಕ್ಕದಲ್ಲಿದ್ದ ಕೈಗಾಡಿಗಳು, ಡಬ್ಬಿಗಳು ತೆರವುಗೊಳಿಸಲು ಮನವಿ ಸಲ್ಲಿಸಲಾಯಿತು.

ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಮಹಾನಗರ ಪಾಲಿಕೆಗೆ ಬೇಟಿಕೊಟ್ಟು ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದಾರೆ ಸಾರ್ವಜನಿಕರು, ಸಂಘ, ಸಂಸ್ಥೆಗಳಿಂದ ಬರೆದ ಮನವಿ ಪತ್ರಗಳಿಗೆ, ಅರ್ಜಿಗಳಿಗೆ ಬೆಲೆ ಇಲ್ಲವೇ ? ಲಾಕ್‌ಡೌನ್, ಸೀಲ್‌ಡೌನ್ ಕ್ಕಿಂತ ಮುಂಚೆ, ಈ ಮೇಲೆ ಹೇಳಿದ ವಿಷಯಗಳು ಉದ್ಭವಿಸಿದ್ದು ಪಾಲಿಕೆ ಸದಸ್ಯರೊಂದಿಗೆ, ನೈರ್ಮಲ್ಯ ಅಧಿಕಾರಿಗಳೊಂದಿಗೆ ಹಾಗೂ ಪರಿಸರ ಅಬಿಯಂತರರೊಂದಿಗೆ ಅಲ್ಲದೆ whatsapp ಮೂಲಕ ಸಮಸ್ಯಗಳನ್ನು ತಂದಿದ್ದು, 18 ದಿನಗಳು ಕಳೆದರು ಸದರಿ ಸಮಸ್ಯಗಳ ಕುರಿತು ಮಹಾನಗರ ಪಾಲಿಕೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಶ್ರೀ ಮಲ್ಲಿಕಾರ್ಜುನ ತರಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಈ ಸಂದರ್ಭದಲ್ಲಿ ಆಯುಕ್ತರಿಗೆ ತಿಳಿಸಿದರು.

Contact Your\'s Advertisement; 9902492681

ಸಂಘದ ಸದಸ್ಯರ ನಿಯೋಗದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಕಾರ್ಯದರ್ಶಿ ಕರಣ ಆಂದೋಲಾ, ಹಾಗು ಸಂಘದ ಪದಾಧಿಕಾರಿಗಳಾದ ಅಮಿತ ಜೀವಣಗಿ, ವಿನೋದಕುಮಾರ ಜನೆವರಿ, ಶಶಿದರ ಪ್ಯಾಟಿ, ಸುನೀಲ ಮುತ್ತಾ, ಸಂಜು ತಂಬಾಕೆ, ಉಪಸ್ಥಿತರಿದ್ದರು.

ಮನವಿಗೆ ಸ್ಪಂದನೆ: ಇಂದು ಮಹಾನಗರ ಪಾಲಿಕೆಯ ಆಯುಕ್ತರಾದ ರಾಹುಲ ಪಾಂಡ್ವೆ ಬೇಟಿಕೊಟ್ಟು ಸಮಸ್ಯೆ ಆಲಿಸಿದ್ದಾರೆ ಶೀಘ್ರದಲ್ಲೆ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆಂದು ಸ್ಥಳದಲ್ಲೆ ನಿಂತು ಮುಖ್ಯ ರಸ್ತೆಯ ಪಕ್ಕದಲ್ಲಿ ಇಟ್ಟಿರುವ ಕೈಬಂಡಿಗಳು ತೆಗೆಯಲು ಆದೇಶ ನೀಡಿ ಮನವಿ ಸ್ಪಂದಿಸಿದ್ದಾರೆಂದು ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಇ-ಮೀಡಿಯಾ ಲೈನ್ ಗೆ ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here