ಶಹಾಬಾದ ಪತ್ರಕರ್ತರಿಗೆ ಜೆಡಿಎಸ್ ಸನ್ಮಾನ

0
49

ಶಹಾಬಾದ: ಪ್ರಜಾಪ್ರಭುತ್ವದ ಕಾವಲುನಾಯಿ ಎಂದೇ ಕರೆಯಲ್ಪಡುವ ಪತ್ರಿಕಾ ರಂಗ ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಪ್ರಜಾಪ್ರಭುತ್ವದ ಉಳಿವಿಗೆ ಸಾಕಷ್ಟು ಶ್ರಮವಹಿಸುತ್ತಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದಶರ್ಿ ಲೋಹಿತ್ ಕಟ್ಟಿ ಹೇಳಿದರು.
ಅವರು ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪತ್ರಿಕಾ ದಿನಾಚರಣೆಯ ನಿಮಿತ್ತ ಪತ್ರಕರ್ತರಿಗೆ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳಾದರೆ ನಾಲ್ಕನೇ ಅಂಗವೇ ಪತ್ರಿಕಾರಂಗ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ನಾಲ್ಕನೇ ಅಂಗ ಎಂದೇ ಪರಿಗಣಿಸಲಾಗುತ್ತದೆ.ಸರಕಾರ ಮತ್ತು ಜನತೆಯ ನಡುವೆ ಮಾಧ್ಯಮಗಳು ಸೇತುವೆಗಳಾಗಿ ಕೆಲಸ ಮಾಡುತ್ತವೆ.ಸಂವಿಧಾನಬದ್ಧ ಆಡಳಿತ ಸಂಸ್ಥೆಗಳು ಹದ್ದುಮೀರಿದಾಗ ಅವುಗಳ ಹೊಣೆಗಾರಿಕೆಯನ್ನು ನೆನಪಿಸುವ ಹಾಗೂ ಸರಿದಾರಿಗೆ ಬರುವಂತೆ ಕೆಲಸ ಮಾಡುತ್ತಿದೆ. ಇಂದು ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಸಕ್ತ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಸವಾಲಾಗಿದ್ದು, ವರದಿಗಾರರು ಕ್ಲಿಷ್ಟಕರ ಸನ್ನವೇಶದಲ್ಲಿ ಕಾರ್ಯನಿರ್ವಹಿಸುತ್ತಾರೆ.ಅಲ್ಲದೇ ಸಮಾಜದ ಅಭಿವೃದ್ಧಿಗೆ ಪೂರಕವಾದ ವರದಿ ನೀಡಿದಾಗ ಪತ್ರಕರ್ತನ ಘನತೆ ಹೆಚ್ಚುತ್ತದೆ ಎಂದು ಹೇಳಿದರು.

ನಂತರ ಸ್ಥಳೀಯ ಪತ್ರಕರ್ತರಾದ ರಮೇಶಭಟ್, ಮಲ್ಲಿನಾಥ ಪಾಟೀಲ, ವಾಸುದೇವ ಚವ್ಹಾಣ ಹಾಗೂ ರಘುವೀರಸಿಂಗ ಠಾಕೂರ ಅವರನ್ನು ಅವರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ್ರಾಜಾ,ಮುಖಂಡರಾದ ವಿಜಯಲಕ್ಷ್ಮಿ ಬಂಗರಗಿ, ಸಬ್ದುಲ್ ಜಬ್ಬಾರ್, ಚಾಂದ್ ವಾಹೀದಿ,ಹನುಮಾನ ಕಾಂಬಳೆ, ಹೀರಾ ಪವಾರ,ಯುಸೂಫ್ ಸಾಹೇಬ, ಸುನೀಲ ಚವ್ಹಾಣ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here