ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಬಡವರ ಬುದಿಕಿಗೆ ಬರೆ ಎಳೆದಿದೆ ಬಿಜೆಪಿ: ಆರ್‌ಕೆವಿ

0
32

ವಾಡಿ: ಲಾಕ್‌ಡೌನ್ ಸಂಕಷ್ಟಗಳಿಂದ ಚೇತರಿಸಿಕೊಳ್ಳುವ ಮೊದಲೇ ತೈಲ ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರಕಾರ, ಬಡ ಜನರ ಬದುಕಿನ ಮೇಲೆ ಬೆಲೆ ಮತ್ತೊಮ್ಮೆ ಬರೆ ಎಳೆದಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪಟ್ಟಣದ ಶ್ರೀನಿವಾಸಿ ಗುಡಿ ವೃತ್ತದಲ್ಲಿ ಜಮಾಯಿಸಿದ್ದ ಎಸ್‌ಯುಸಿಐ(ಸಿ) ಕಾರ್ಯಕರ್ತರು, ಉಪ ತಹಶೀಲ್ದಾರ ಅವರ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದ ನಂತರ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ಇಪ್ಪತ್ತು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಲೇಯಿದೆ. ೭೩ ರೂ. ಲೀಟರ್ ಇದ್ದ ಪೆಟ್ರೋಲ್ ಇಂದು ೮೩ ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಬೆಲೆಯೂ ಕೂಡ ಇದೇ ಪ್ರಮಣದಲ್ಲಿ ಏರಿಕೆ ಕಂಡಿದೆ. ಪರಿಣಾಮ ಜನಸಾಮಾನ್ಯರ ಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ನಿಂತಿದೆ. ಕಷ್ಟದ ದಿನಗಳಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು, ಜನದ್ರೋಹಿ ನಿಲುವು ಪ್ರದರ್ಶಿಸಿವೆ ಎಂದು ಟೀಕಿಸಿದರು.

Contact Your\'s Advertisement; 9902492681

ಜನರಿಂದ ವಸೂಲಿ ಮಾಡುವ ತೆರಿಗೆಯನ್ನು ಬಡವರಿಗಾಗಿ ಬಳಸಲಾಗುವುದು ಎಂದು ಬೊಗಳೆ ಬಿಡುತ್ತಿರುವ ಸರಕಾರಗಳು, ದೊಡ್ಡ ಉದ್ಯಮಿಪತಿಗಳಾದ ವಿಜಯ ಮಲ್ಯಾ, ಬಾಬಾ ರಾಮದೇವ, ಮೆಹುಲ್ ಚೋಕ್ಸಿ ಮುಂತಾದ ಶೋಷಕರ ಬ್ಯಾಂಕ್‌ಗಳ ರೂ. ೬೮ ಕೋಟಿ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡಿದೆ. ಇದರ ನಡುವೆಯೇ ತೈಲ ಬೆಲೆ ಏರಿಕೆಯನ್ನು ಪೆಟ್ರೋಲಿಯಂ ಸಚಿವರು ನಾಚಿಕೆಯಿಲ್ಲದೆ ಸಮರ್ಥಿಸಿಕೊಂಡಿದ್ದಾರೆ. ೧.೪ ಲಕ್ಷ ಕೋಟಿಯಷ್ಟು ಕಾರ್ಪೋರೇಟ್ ತೆರಿಗೆಯನ್ನು ಬಿಜೆಪಿ ಸರಕಾರ ಮನ್ನಾ ಮಾಡಿದೆ ಎಂದು ದೂರಿದರು. ತೈಲಬೆಲೆ ಏರಿಕೆ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡರಾದ ಗೌತಮ ಪರತೂರಕರ, ಶರಣು ಹೇರೂರ, ವೆಂಕಟೇಶ ದೇವದುರ್ಗಾ, ಅರುಣ ಹಿರೇಬಾನರ, ರಾಜು ಒಡೆಯರಾಜ ಪಾಲ್ಗೊಂಡಿದ್ದರು. ನಾಲವಾರ ನಾಡಕಚೇರಿಯ ಪ್ರಭಾರ ಉಪ ತಹಶೀಲ್ದಾರ ಅಂಬು ಜಾಧವ ಮನವಿ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here