ಹಸನಾಪುರ ಸ್ಮಶಾನ ಮೇಲುಸ್ತುವಾರಿ ಸಮಿತಿಯಿಂದ ಹಸರೀಕರಣ ಕಾರ್ಯ

0
39

ಸುರಪುರ: ಇಂದು ಪರಿಸರ ರಕ್ಷಣೆ ಎಂಬುದು ಎಲ್ಲರ ಮೇಲಿರುವ ಜವಬ್ದಾರಿಯಾಗಿದೆ.ಪರಿಸರ ರಕ್ಷಣೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಮಾತನಾಡಿದರು.

ನಗರದ ಹಸನಾಪುರ ಸೀಮೆಯಲ್ಲಿನ ಸರ್ವೇ ನಂಬರ್ ೭೩/೧ ರಲ್ಲಿನ ಒಂದು ಎಕರೆ ಸ್ಮಶಾನ ಭೂಮಿಯಲ್ಲಿ ಗಿಡಗಳನ್ನು ಬೆಳೆಸಲು ಪೂರ್ವ ಸಿದ್ಧತೆ ಸಂದರ್ಭದಲ್ಲಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಯು ಎಲ್ಲಿ ಸಾಧ್ಯವೊ ಅಲ್ಲಿ ಒಂದು ಮರ ಬೆಳೆಸುವ ಸಂಕಲ್ಪ ಮಾಡಬೇಕು.ಇದರಿಂದ ಉತ್ತಮ ಪರಿಸರ ನಿರ್ಮಿಸಲು ಸಾಧ್ಯವಾಗಲಿದೆ.ಇಂದು ನಮ್ಮ ಹಸನಾಪುರದ ಸ್ಮಶಾನ ಮೇಲುಸ್ತುವಾರಿ ಸಮಿತಿಯಿಂದ ಸ್ಮಶಾನದಲ್ಲಿಯ ಜಾಗ ವ್ಯರ್ಥ ಮಾಡಬಾರದೆಂದು ಒಂದು ಎಕರೆ ಜಾಗದಲ್ಲಿ ಸಾಧ್ಯವಾದಷ್ಟು ಮರಗಳನ್ನು ಬೆಳೆಸಲು ಸಂಕಲ್ಪ ಮಾಡಲಾಗಿದೆ.

Contact Your\'s Advertisement; 9902492681

ಆದ್ದರಿಂದ ಈ ಜಾಗದಲ್ಲಿ ಸುಮಾರು ಮೂವತ್ತು ಗುಂಡಿಗಳನ್ನು ನಿರ್ಮಿಸಲಾಗಿದೆ.ಸದ್ಯ ಮೂವತ್ತು ಸಸಿಗಳನ್ನು ನೆಡುವ ಮೂಲಕ ಸ್ಮಶಾನದಲ್ಲೂ ಹಸರೀಕರಣ ನಿರ್ಮಾಣದ ಉದ್ಧೇಶ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಭೀಮಣ್ಣ ಭಜಂತ್ರಿ,ನರಸಪ್ಪ ಚಿನ್ನಾಕಾರ,ಈಡಿಗ ಸಮಾಜದ ಮುಖಂಡ ಮುರಳಿ,ಯಲ್ಲಪ್ಪ ಗದ್ವಾಲ್,ಬಸವರಾಜ ಚಿನ್ನಾಕಾರ್,ಗೋವಿಂದ್ ಚಿನ್ನಾಕಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here