ಕಲಬುರಗಿ: ಕೊರೊನಾ ಜಿಲ್ಲೆಯಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ಮತ್ತೆ 53 ಪಾಜಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅದೇ ರೀತಿ ಇಂದು 69 ಸೋಂಕು ಪೀಡಿತರು ಕೊರೊನಾ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಕಲಬುರಗಿಯಲ್ಲಿ ಪೀಡಿತರ ಸಂಖ್ಯೆ 1699ಗೆ ತಲುಪಿದೆ.
ರಾಜ್ಯದಲ್ಲಿ ಇಂದು ಬರೋಬ್ಬರಿ 30 ಜನ ಮೃತಪಟ್ಟಿದ್ದು, 1843 ಹೊಸ ಕೊರೊನಾ ಪ್ರಕರಣ ಪಾಜಿಟಿವ್ ಆಗಿವೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.