ಕಲಬುರಗಿಯಲ್ಲಿ ಮುಂದುವರೆದ ಅಧಿಕಾರಿಗಳ ವರ್ಗಾವಣೆ: ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ

0
100

ಕಲಬುರಗಿ: ಜಿಲ್ಲೆಯಲ್ಲಿ‌ ಕೊರೋನಾ ಮಹಾಮಾರಿ ತನ್ನ ಉಗ್ರರೂಪ ತಳೆದಿರುವ ಈ ಸಂದರ್ಭದಲ್ಲಿ ಸೋಂಕು ನಿವಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬದಲು ಸರಕಾರ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಕಮೀಷನರ್ ವರ್ಗಾವಣೆ ಬೆನ್ನಲ್ಲೆ ಸರಣಿ ಟ್ವಿಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವ ಶಾಸಕರು ಕಮೀಷನರ್ ಆ ಹುದ್ದೆಯಲ್ಲಿದ್ದುದು ಕೇವಲ ಆರು ತಿಂಗಳು ಮಾತ್ರ. ಪ್ರಸ್ತುತ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ‌ ಅವರನ್ನು ವರ್ಗಾವಣೆ ಮಾಡಲಾಗಿದೆ, ಇದು ಸರಕಾರದ ಅನಗತ್ಯ ಕ್ರಮವಾಗಿದೆ ಎಂದು ಶಾಸಕರು ಹರಿಹಾಯ್ದಿದ್ದಾರೆ.

Contact Your\'s Advertisement; 9902492681

” ನಾನು ಪದೇ ಪದೇ ಹೇಳುತ್ತಿದ್ದೇನೆ ಅಧಿಕಾರಿಗಳ ವರ್ಗಾವಣೆ ಒಂದು ದಂಧೆಯಾಗಿ ಮಾರ್ಪಟ್ಟಿದ್ದು ಇದರಿಂದಾಗಿ ಕಲಬುರಗಿ ಭ್ರಷ್ಟಾಚಾರದ ಕೂಪದಂತಾಗಿದೆ. ಈ ಮುಂಚೆ ಜಿಲ್ಲಾಧಿಕಾರಿ ವರ್ಗಾವಣೆ ಆ ನಂತರ ತಡೆ‌ಹಿಡಿಯಲಾಗಿತ್ತು. ಈಗ ಕಮೀಷನರ್ ವರ್ಗಾವಣೆಯಾಗಿದೆ. ಅಧಿಕಾರಿಗಳ ವರ್ಗಾವಣೆ ಮಾಡಿಸುವುದರ ಬದಲು ಬಿಜೆಪಿ ನಾಯಕರು ಕೊರೋನಾ ವಿರುದ್ದದ ಹೋರಾಟಕ್ಕೆ ಪ್ರಾಮುಖ್ಯತೆ ನೀಡಲಿ”. ಪ್ರಿಯಾಂಕ್ ಖರ್ಗೆ, ಶಾಸಕರು ಚಿತ್ತಾಪುರ ಮತ ಕ್ಷೇತ್ರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here