ಗುರು ಪ್ರೀಯರಾದ ಖ್ವಾಜಾ ಬಂದಾ ನವಾಜ್

0
207
  • ಸಾಜಿದ್ ಅಲಿ

ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ ಗೆಸುದರಾಜ್ (ರ.ಅ) ಅವರ ಇದೇ ಜುಲೈ 7, 8 ಮತ್ತು 9 ಉರುಸ್ ಸಂಭ್ರಮ ಇದ್ದು, ಕೊರೊನಾ ಮಹಾಮಾರಿ ಹಿನ್ನೆಯಲ್ಲಿ ಜಾತ್ರೆಯನ್ನು ರದ್ದು ಮಾಡಿ, ದರ್ಗಾ ಮೈದಾನದಲ್ಲಿ ಸರಳ ಉರುಸ್ ಆಚರಣೆ ನಡೆಸಲಾಗುವುದೆಂದು ದರ್ಗಾದ ಪಿಠಾಧಿಪತಿಗಳಾದ ಡಾ. ಸೈಯದ್ ಶಾ ಖೂಸ್ರೊ ಹುಸ್ಸೇನಿ ಅವರು ತಿಳಿಸಿದ್ದಾರೆ.

ಭಕ್ತರು ಮನೆಯಲ್ಲೆ ಖ್ವಾಜಾ ಅವರ ಭಕ್ತಿ ಮಾಡುವ ಮೂಲಕ ಉರುಸ್ ಆಚರಣೆ ಮಾಡಬೇಕೆಂದು ಬಂದಾ ನವಾಜ್ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಈ ಪ್ರಯುಕ್ತ ಬಂದಾ ನವಾಜ್ (ರ.ಅ) ಅವರ ಗುರು ಶಿಷ್ಯರ ಸಂಬಂಧ ಕುರಿತು ಖ್ವಾಜಾ ಅವರ ಉರುಸ್ ನಿಯಮಿತ ಜೀವನ ಕುರಿತು ಸಂಚಿಕೆಯಾಗಿ ಇ-ಮೀಡಿಯಾ ಲೈನ್ ಓದುಗರ ಬಳಗಕ್ಕೆ ತಲುಪಿಸುವ ಸಣ್ಣ ಪ್ರಯತ್ನ ಮಾಡುತ್ತಿದೆ. ಈ ಪ್ರಯುಕ್ತ ಇಂದು ಖ್ವಾಜಾ ಬಂದಾ ನವಾಜ್ ಮತ್ತು ಅವರ ಗುರುಗಳಾದ ದೆಹಲಿಯ ಪ್ರಸಿದ್ಧ ಸೂಫಿ ಸಂತ ಹಜರತ್ ನಸಿರೊದ್ದೀನ್ ಚಿರಾಗ ದೆಹಲ್ವಿ (ರ.ಅ) ಅವರ ಗುರು ಶಿಷ್ಯರ ಸಂಬಂಧ ಸಂಚಿಕೆ ಇದಾಗಿದೆ.

ಪ್ರತಿ ಫಜರ್ (ಸೂರ್ಯ ಉದಯದ ಮುಂಚಿನ ಪ್ರಾರ್ಥಾನಾ ಸಮಯ)ದಲ್ಲಿ ರಂದು ಬಂದಾ ನವಾಜ್ ಅವರು ತನ್ನ ವಝೂ ಮುಗಿಸಿ ತನ್ನ ಗುರುಗಳಾದ ಸೂಫಿ ನಸಿರೊದ್ದೀನ್ ಚಿರಾಗ್ ದೆಹಲ್ವಿ ಅವರ ಹುಜರಾ (ವಿಶ್ರಾಂತಿ ಕೊಣೆ)ಗೆ ತೆರಳಿ ಅವರಿಗೆ ವಝೂ ಮಾಡಿಸಿ, ಎಲ್ಲ ಶಿಷ್ಯರೊಂದಿಗೆ ಫಜರ್ ಪ್ರಾರ್ಥನೆಗೆ ಮಾಡುತ್ತಿದ್ದರು. ಪ್ರಾರ್ಥನೆಯ ನಂತರ ಅವರು ಗುರುಗಳಾದ ನಸಿರೊದ್ದೀನ್ ಚಿರಾಗ್ ಅವರು ತನ್ನ ಶಿಷ್ಯರಿಗೆ ಮತ್ತು ಭಕ್ತರಿಗೆ ಬೋಧನೆ ನೀಡುತ್ತಿದರು.

ಬೋಧನೆಯ ನಂತರ ಬಂದಾ ನವಾಜ್ ಗುರುಗಳ ಅವರ ಧ್ಯಾನ ಕೊಣೆಗೆ ಕರೆದೊಯ್ದು, ತಾನು ದೈವ ಧ್ಯಾನದಲ್ಲಿ ತೊಡುತ್ತಿದ್ದರು.

ಜೋಹರ್ (ಮಧ್ಯಹ್ನ ಪ್ರಾರ್ಥನೆ) ಗೆ ಬಂದಾ ನವಾಜ್ ಗುರುಗಳಿಗೆ ವಝೂ ಮಾಡಿಸಿ ನಮಾಜ್ ನಂತರ ಗುರುಗಳಿಗೆ ವಿಶ್ರಾಂತಿ ಕೊಣೆಗೆ ತಲುಪಿಸಿ, ಬಂದಾ ನವಾಜ್ ಇಡಿ ದಿನ ದೈವ ಧ್ಯಾನ ಕಳೆಯುತ್ತಿದ್ದರು.

ಪ್ರತಿ ದಿನ ಗುರು ಶಿಷ್ಯರ ನಡುವೆ ಇದೇ ರೀತಿಯ ಕಾರ್ಯಚಟುವಟಿಕೆ ನಡೆಯುತ್ತಿತ್ತು. ಕೆಲವು ಪ್ರಮುಖ ಕಡೆಗೆ ಪ್ರಯಾಣಕ್ಕೆ ತರಳುವ ವೇಳೆಯಲ್ಲಿ ಬಂದಾ ನವಾಜ್ ಅವರು ಗುರುಗಳೊಂದಿಗೆ ತೆರಳಿ ಅವರ ಸೇವೆಯಲ್ಲಿ ನಿರತರಾಗುತ್ತಿದರು.

ಬೋಧನಾ ಸಂದರ್ಭದಲ್ಲಿ ಬಂದಾ ನವಾಜ್ ಅವರು ತನ್ನ ಗುರುಗಳ ಸೇವೆಯನ್ನು ಚಾಚು ತಪ್ಪದೆ ಮಾಡುವ ಮೂಲಕ ಹಲವು ವರ್ಷ ಗುರುಗಳ ಸೇವೆಯಲ್ಲಿ ಕಳೆಯುತ್ತಾರೆ.

ಗುರು ಶಿಷ್ಯರ ಸಂಬಂಧ ಒಬ್ಬರು ಬಿಟ್ಟಿರದ ಮಟ್ಟಕ್ಕೆ ತಲುಪಿತು. ಗುರು ಶಿಷ್ಯರ ನಡುವಿನ ಸಂಬಂಧ ಎರಡು ದೇಹ ಒಂದು ಉಸಿರು ಎಂಬಂತೆ ಭಕ್ತಿ ಇತ್ತು.

ಬಂದಾ ನವಾಜ್ ಅವರು ಹಲವು ವರ್ಷಗಳ ಕಾಲ ಗುರು ಭಕ್ತಿ ಮಾಡುವ ಮೂಲಕ ದೈವ ಭಕ್ತಿಯನ್ನು ಸರಳವಾಗಿ ಪಡೆದು ಜೀವನದಲ್ಲಿ ಗುರು ಭಕ್ತಿ ಮತ್ತು ದೈವ ಭಕ್ತಿಯನ್ನು ಎತ್ತಿಹಿಡಿದು ಸೂಫಿ ಮಾರ್ಗದಲ್ಲಿ ಬೆಳಕು ಕಂಡರು. – ಡಾ. ರಾಯಿಸಾ ನಸರೀನ್, ಸಂಶೋಧಕಿ ಕೆ.ಬಿ.ಎನ್, ಉಪನ್ಯಾಸಕಿ ಬಿಬಿ ರಾಜಾ ಪದವಿ ಕಾಲೇಜು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here