ಡಾ. ಗೀತಾ ನಾಗಭೂಷಣ್ ಅವರ ನುಡಿನಮನ ಕಾರ್ಯಕ್ರಮ

0
45

ಕಲಬುರಗಿ: ಶೋಷಣೆ ಅನ್ಯಾಯ ಕಂದಾಚಾರದ ವಿರುದ್ಧ ವಿಶೇಷವಾಗಿ ಮಹಿಳಾ ಶೋಷಣೆಯನ್ನೇ ಕಥೆ ಕಾದಂಬರಿಗಳ ಮೂಲಕ ಚಿತ್ರಿಸಿದ ನಾಡಿನ ಹಿರಿಯ ಬಂಡಾಯ ಸಾಹಿತಿ ನಾಡೋಜ ಡಾ. ಗೀತಾ ನಾಗಭೂಷಣ ಅವರಾಗಿದ್ದರೆಂದು ಸಂಸ್ಥಾಪಕ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.

ಉದಯೋನ್ಮುಖ ಯುವ ಬರಹಗಾರ ಬಳಗ ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡ ನಾಡೋಜ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಆಗಿರುವ ಡಾ. ಗೀತಾ ನಾಗಭೂಷಣ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಬಳಗದ ಗೌರವಾಧ್ಯಕ್ಷ ಹಿರಿಯರಾಗಿರುವ ಡಾ. ಸೂರ್ಯಕಾಂತ ಪಾಟೀಲ್ ಅವರು ಮಾತನಾಡಿ ಅತ್ಯಂತ ಕಷ್ಟದ ಬದುಕು ಸವೆದ ಗೀತಾ ಅಕ್ಕನವರ ಹಸಿಮಾಂಸ ಮತ್ತು ರಣಹದ್ದುಗಳು,ಬದುಕು ಇತ್ಯಾದಿ ಸುಮಾರು ೩೫ ಕಾದಂಬರಿಗಳಲ್ಲಿನ ಸಾಹಿತ್ಯ ನಾಡು ಮೆಚ್ಚುವಂತದ್ದಾಗಿದೆ ಇಂತಹ ಧೀಮಂತ ಮಹಿಳಾ ಸಾಹಿತಿ ಆಗಲಿರುವುದು ತುಂಬಲಾರದ ನಷ್ಟವಾಗಿದೆ ಎಂದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ ಬರಹಗಾರ ಬಳಗದ ಅಧ್ಯಕ್ಷ ಡಾ. ಪ್ರೇಮಚಂದ ಚವಾಣ್ ಮಾತನಾಡಿ ಡಾ.ಗೀತಾ ನಾಗಭೂಷಣ್ ಅವರು ಡಾಕ್ಟರೇಟ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿ ಪಡೆದವರಾಗಿದ್ದು ಅವರ ನಿಧನ ಕಲ್ಯಾಣ ಕರ್ನಾಟಕದ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.
ಈ ನುಡಿನಮನ ಕಾರ್ಯಕ್ರಮದಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ದೌಲತರಾಯ ಮಾಲಿಪಾಟೀಲ್, ಅನಿಲಕುಮಾರ ಕುಲಕರ್ಣಿ, ನಾಗೇಂದ್ರ ಪೂಜಾರಿ, ಉದಯ ಪಡಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here