ಸೋಂಕು: ಇ-ಮೀಡಿಯಾ ಕವಿತೆ

0
174

ಸೋಂಕು

ನನ್ನ ಹೆಣದ ಎದೆಯ ಮೇಲೆ
ನೊಣಗಳೂ ಕೂಡಲು ಹೇಸುತ್ತಿವೆ
ಹಾರಿ ಬರುತ್ತಿಲ್ಲ ಹತ್ತಿರ ರಣಹದ್ದುಗಳು
ಋಣದ ಮಡದಿ-ಮಕ್ಕಳೂ
ಮುಂದಾಗುತ್ತಿಲ್ಲ ಅಪ್ಪಿ ಮುತ್ತಿಡಲು
ನನ್ನ ಸಮಾದಿಯೊಳಗೆ
ಹಚ್ಚೋರಿಲ್ಲ ಸನಾತನದ ಹಣತೆ
ಮಣ್ಣು ಮುಚ್ಚುವ ಕೊನೆಯ ಗಳಿಗೆಗೂ
ಮುಖ ನೋಡುವ ಇಚ್ಚೆಯಿಲ್ಲ ಯಾರಿಗೂ
ಧರ್ಮ-ಜಾತಿಯ ಸಂಸ್ಕಾರಗಳೂ
ಕುಣಿ ಸೇರುತ್ತಿವೆ ನನ್ನ ಶವದೊಂದಿಗೆ
ಶಾಸ್ತ್ರ, ಪಂಚಾಂಗ, ಶುಭ-ಅಶುಭ
ರಾಹು-ಕೇತು ಸಂಪ್ರದಾಯಗಳೆಲ್ಲವೂ
ಮಣ್ಣಾಗುತ್ತಿವೆ ನೋಡಿರೋ
ಇಲ್ಲಿ ನನ್ನೊಂದಿಗೆ ಮಸಣದಲ್ಲಿ
ನಾನು ನಾನಲ್ಲ…
ನಿಮ್ಮ ಪ್ರೀತಿಯ ಸೋಂಕು..!!
-ಮಡಿವಾಳಪ್ಪ ಹೇರೂರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here