ನನ್ನ ಹೆಣದ ಎದೆಯ ಮೇಲೆ ನೊಣಗಳೂ ಕೂಡಲು ಹೇಸುತ್ತಿವೆ ಹಾರಿ ಬರುತ್ತಿಲ್ಲ ಹತ್ತಿರ ರಣಹದ್ದುಗಳು ಋಣದ ಮಡದಿ-ಮಕ್ಕಳೂ ಮುಂದಾಗುತ್ತಿಲ್ಲ ಅಪ್ಪಿ ಮುತ್ತಿಡಲು ನನ್ನ ಸಮಾದಿಯೊಳಗೆ ಹಚ್ಚೋರಿಲ್ಲ ಸನಾತನದ ಹಣತೆ ಮಣ್ಣು ಮುಚ್ಚುವ ಕೊನೆಯ ಗಳಿಗೆಗೂ ಮುಖ ನೋಡುವ ಇಚ್ಚೆಯಿಲ್ಲ ಯಾರಿಗೂ ಧರ್ಮ-ಜಾತಿಯ ಸಂಸ್ಕಾರಗಳೂ ಕುಣಿ ಸೇರುತ್ತಿವೆ ನನ್ನ ಶವದೊಂದಿಗೆ ಶಾಸ್ತ್ರ, ಪಂಚಾಂಗ, ಶುಭ-ಅಶುಭ ರಾಹು-ಕೇತು ಸಂಪ್ರದಾಯಗಳೆಲ್ಲವೂ ಮಣ್ಣಾಗುತ್ತಿವೆ ನೋಡಿರೋ ಇಲ್ಲಿ ನನ್ನೊಂದಿಗೆ ಮಸಣದಲ್ಲಿ ನಾನು ನಾನಲ್ಲ…