ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಜನರ ಜೀವನ ಅಸ್ತವ್ಯಸ್ತ ಮಾಡಿದ್ದು, ಕೋವಿಡ್-19 ಪ್ರಕರಣ ಏರಿಕೆ ಜನರಲ್ಲಿ ದಿನೇ ದಿನೇ ಆತಂಕ ಮತ್ತು ತಲ್ಲಣ ಸೃಷ್ಟಿಸುತ್ತಿದೆ.
ವೈರಸ್ ಗೆ ಮೊದಲ ಬಲಿ ಪಡೆದ ಕಲಬುರಗಿ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತಿರುವುದು ಜಿಲ್ಲೆಯನ್ನು ಬೆಚ್ಚಿಬಿಳಿಸಿದ್ದು, ಪೊಲೀಸ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಕೊರೊನಾ ವಾರಿಯರ್ಸ್ ಸೇರಿದಂತೆ ಇಬ್ಬರು ಶಾಸಕರಿಗೆ ಕೊರೊನಾ ಸೋಂಕು ಹರಡಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ಸ್ವಯಂ ಪ್ರೇರಿತ ಹೋಂ ಕ್ವಾರಂಟೈನ್ ಆಗಿದ್ದಾರೆ ಎನ್ನಲಾಗಿದೆ.
ಅದೇ ರೀತಿ ಇಂದು ಜಿಲ್ಲೆಯ ಆಳಂದ ತಾಲ್ಲೂಕಿನ ತಹಶೀಲ್ದಾರ ಗ್ರೇಡ್-2 ಓರ್ವರಿಗೆ ಸೋಂಕು ಪಾಜಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ ಕಚೇರಿ ಎರಡು ದಿನಗಳ ವರೆಗೆ ಸಿಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.