ಕಲೆ-ಕ್ರೀಡೆನಾಟಕಬಿಸಿ ಬಿಸಿ ಸುದ್ದಿಸಾಹಿತ್ಯ ಕರಡಿ ಕುಣಿತ/ಕರಡಿ ಕುಣಿಸುವವ: ಇ-ಮೀಡಿಯಾ ಲೈನ್ ಕವಿತೆ ಮೂಲಕ emedialine - July 13, 2020 0 292 Facebook Twitter Pinterest WhatsApp ಕರಡಿ ಕುಣಿತ/ಕರಡಿ ಕುಣಿಸುವವ ಕರಡಿ ಕುಣಿಸುತ ಬಂದಾನ ಕರದಿ ಡಮರುಗ ಪಿಡಿದಾನ ಮನೆಯ ಅಂಗಳಕೆ ಬಂದಾನ ಜಾಂಬವಂತನ ತಂದಾನ… ಅಂಗಳಕೆ ಮಕ್ಕಳ ಕರೆದಾನ ಕರಡಿ ಕುಣಿತವ ತೋರಿಸ್ಯಾನ ಜೋರಾಗಿ ಕಿರುಚಿ ಮಕ್ಕಳು ಕರಡಿ ಕುಣಿತವ ಮೆಚ್ಚಲು… ಪುಟಾಣಿಗಳನು ಕರೆ ಕರೆದು ಕೈ ಕಡಗವು ಕುಣಿ ಕುಣಿದು ಜಾಂಬವಂತನ ನಡಿಗೆಯ ತೋರಿ ಹಸಿವು ನೀಗಲು ಬಿಕ್ಷೆಯ ಕೋರಿ ಚಿಕ್ಕ ಮಕ್ಕಳ ಭಯವ ಕಳೆಯಲು ಕರಡಿ ರೋಮದ ತಾಯ್ತವ ನೀಡಿ ತಾಯಿ ಮುಂದೆ ಮರ ಧಾನ್ಯವ ಬೇಡಿ ಹೊಗಳುವ ತಾಯಿ ಗುಣಗಳ ಹಾಡಿ… ಊರ ಬಯಲಿನ ಅಂಗಳದೊಳಗೆ ಜಾಂಬವಂತನ ಕೆಣಕಿ ಮಣಿಸಲು ಆಹ್ವಾನ ನೀಡುವ ಊರ ಜಟ್ಟಿಗೆ ನುಡಿಸಿ ಡಮರುಗ ಕಡಗ ಒಟ್ಟಿಗೆ.. ಜಟ್ಟಿಯು ಜಂಭದಿ ಜುಟ್ಟವ ಕಟ್ಟಿ ಮೀಸೆಯ ತಿರುವಿ ತೊಡೆಯ ತಟ್ಟಿ ಜಾಂಬವಂತನ ಜೊತೆಗೆ ಸೆಣಸಲು ಕರಡಿಯ ಸೋಲಿಸಿ ಕೇಕೆ ಹಾಕಿದ… ಬಸವರಾಜ್ ಚೌಡ್ಕಿ, ಕುಕನೂರ