ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಮಾನ ಸರಪಳಿ ರಚಿಸಿ ಪ್ರತಿಭಟನೆ.

0
45

ಸುರಪುರ: ಆಶಾ ಕಾರ್ಯಕರ್ತೆಯರು ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ.ಸರಕಾರ ನಮ್ಮ ಆರೋಗ್ಯ ರಕ್ಷಣೆಗಾಗಿ ಸರಿಯಾದ ಕಿಟ್‌ಗಳನ್ನೂ ನೀಡಿಲ್ಲ.ಸ್ಯಾನಿಟೈಜರಾಗಲಿ, ಕರ ರಕ್ಷಾ ಕವಚಗಳಾಗಲಿ, ಮುಖಗವಸು,ಏನನ್ನು ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಎಐಟಿಯುಸಿ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು,ನಾವು ಕೆಲಸವನ್ನು ನಿಲ್ಲಿಸಿ ಸುಮಾರು ಐದು ದಿನಗಳಿಂದ ಹೋರಾಟ ನಡೆಸಿದರು ಸರ್ಕಾರ ನಮ್ಮ ಗೋಳನ್ನು ಕೇಳುತ್ತಿಲ್ಲವೆಂದು ಬೇಸರವಾಗುತ್ತಿದೆ ಸರ್ಕಾರ ನಮ್ಮ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕಡೆಗಣಿಸುತ್ತಾ ಬರುತ್ತಿದೆ.ಅನೇಕ ವರ್ಷಗಳಿಂದ ಕಡಿಮೆ ಗೌರವ ಧನದಲ್ಲಿ ಸೇವೆ ಮಾಡುತ್ತಿದ್ದೇವೆ, ಹಗಲಿರುಳು ನಾವು ದುಡಿಯುತ್ತೇವೆ ಆದರೆ ಸರ್ಕಾರ ನಮ್ಮ ಶ್ರಮಕ್ಕೆ ಬೆಲೆ ನೀಡುತ್ತಿಲ್ಲ ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಸರ್ಕಾರ ಕೂಡಲೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ೧೨ ಸಾವಿರ ಪ್ರತಿ ತಿಂಗಳ ಸಂಬಳ ಘೋಷಿಸಬೇಕು ಮತ್ತು ನಮಗೆ ಕೊರೊನಾ ರಕ್ಷಣೆಗಾಗಿ ಅಗತ್ಯವಾದ ಉತ್ತಮ ಗುಣಮಟ್ಟದ ಕಿಟ್‌ಗಳನ್ನು ನೀಡಬೇಕು ಅಲ್ಲಿಯವರೆಗೆ ಹೋರಾಟ ನಿರಂತರವಾಗಿ ನಡೆಸಲಾಗುವುದು ಎಂದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಶಾಂತವ್ವ ಹಸನಾಪುರ, ಅಶ್ವೀನಿ, ಪ್ರಮಲತಾ ತಾಯಮ್ಮ, ಶ್ರೀದೇವಿ, ಸುಜಾತ, ವಿಜಯಲಕ್ಷ್ಮೀ, ಬಸಮ್ಮ, ಹುಲಗಮ್ಮ, ಶಿವಕಾಂತಮ್ಮ, ದೇವಮ್ಮ, ಮರೆಮ್ಮ, ಚಂದಮ್ಮ, ಮಾನಮ್ಮ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here