ಅಂಗನವಾಡಿ ನೌಕರರ ಎರಡನೇ ದಿನ ಮುಂದುವರೆದ ಪ್ರತಿಭಟನೆ

0
54

ಸುರಪುರ: ಈಗಾಗಲೆ ನಾವು ಕಳೆದ ಎರಡು ದಿನಗಳಿಂದ ಹೋರಾಟ ಆರಂಭಿಸಿದ್ದು ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂಧಿಸುತ್ತಿಲ್ಲ,ಅಂಗನವಾಡಿ ನೌಕರರು ಕೊರೊನಾ ಸೈನಿಕರಾಗಿದ್ದು ಎಲ್ಲರಿಗೂ ಮಾಸ್ಕ್ ಸ್ಯಾನಿಟೈಜರ್ ಸೇರಿದಂತೆ ಅಗತ್ಯ ವಸ್ತುಗಳು ನೀಡಬೇಕೆಂದು ಮನವಿ ಮಾಡುತ್ತಿದ್ದೆವೆ ಎಂದು ಅಂಗನವಾಡಿ ನೌಕರರ ಸಂಘದ ಮುಖಂಡ ಬಸ್ಸಮ್ಮ ಆಲ್ಹಾಳ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿ ಮುಂದೆ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಅವರು ಕೊರನಾ ಕೆಲಸಕ್ಕೆ ೨೫೦೦೦ ಪ್ರೋತ್ಸಾಹವನ್ನು ನೀಡಬೇಕು, ಮೇಲ್ವಿಚಾರಕಿಯರ ಹುದ್ದೆಗಳು ಶೇಕಡ ೧೦೦ ರಷ್ಟು ಮೀಸಲು ನೀಡಬೇಕು, ಅಂಗನವಾಡಿ ಕಾರ್ಯಕರ್ತರಿಗೆ ೨೧ ಸಾವಿರ ವೇತನ ನಿಗದಿ ಮಾಡಬೇಕು, ಪ್ರತಿ ತಿಂಗಳ ಮೊಟ್ಟೆ ಬಿಲ್ಷಮುಂಗಡವಾಗಿ ನೀಡಬೇಕು. ಆದಾಯ ತೆರಿಗೆ ಕಟ್ಟಲು ಸಾಮರ್ಥ್ಯವಿಲ್ಲದ ಕುಟುಂಬಗಳಿಗೆ ೭ ಸಾವಿರದ ೫ ನೂರು ರೂಪಾಯಿ ಸಹಾಯಧನ ನೀಡಬೇಕು.

Contact Your\'s Advertisement; 9902492681

ಅಂಗನವಾಡಿ ನೌಕರರ ಮೇಲಾಗುವ ಹಲ್ಲೆಗಳು ನಡೆಯದಂತೆ ಎಚ್ಚರ ವಹಿಸಿ ಹಾಗೂ ಜನವಿರೋಧಿ ವಿದ್ಯುತ್ ಕಾಯ್ದೆ ಭೂ ಕಾಯ್ದೆ ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ್ ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸುರೇಖಾ ಕುಲಕರ್ಣಿ ನಸೀಮಾ ಮುದನೂರು ರಾಧಾಬಾಯಿ ಲಕ್ಷ್ಮಿಪುರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here