ಕೋವಿಡ್-19 ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಟಿ.ಎಂ.ಶಾಹೀದ್ ತೆಕ್ಕಿಲ್

0
59

ಸುಳ್ಯ: ಪ್ರಪಂಚದಾದ್ಯಂತ ಹಬ್ಬುತ್ತಿರುವ ಮಹಾಮಾರಿ ಸಾಂಕ್ರಾಮಿಕ ರೋಗ ಕೋವಿಡ್ -19 ರ ವಿರುಧ್ದ ಹೋರಾಡಲು ರಾಜ್ಯದಲ್ಲಿ ರಾಜ್ಯ ಸರಕಾರಕ್ಕೆ ವಿರೋಧ ಪಕ್ಷದ ನಾಯಕರಾದ ಶ್ರೀಯುತ ಸಿದ್ದರಾಮಯ್ಯರವರು, ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ನೀಡಿದ್ದರು, ರಾಜ್ಯ ಸರಕಾರ ಮಾತ್ರ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಜನರ ಪ್ರಾಣದ ಮೇಲೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.

ಸರಕಾರ ಪ್ರಾಥಮಿಕ ಹಂತದಲ್ಲಿ ರೋಗವನ್ನು ನಿಯಂತ್ರಿಸಲು ವಿಫಲವಾಗಿದ್ದು 4 ತಿಂಗಳು ಸರಕಾರ ಬೇಜವಬ್ದಾರಿಯಿಂದ ವರ್ತಿಸಿದ್ದರು ಕೂಡ ಕಾಂಗ್ರೆಸ್ ಪಕ್ಷ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ರಾಜ್ಯ ಸರಕಾರ ಮಾತ್ರ ರೋಗಿಗಳು ಹೆಚ್ಚಾದರು ಕೂಡ ಆಸ್ಪತ್ರೆಗಳಲ್ಲಿ ಬೆಡ್ ಗಳ,ಹಾಸಿಗೆ ಗಳ ಕೊರತೆ ,ಉಪಕರಣಗಳ ಕೊರತೆ,ಮುಂತಾದ ಪ್ರಾಥಮಿಕ ಸೌಲಭ್ಯಗಳನ್ನು ನೀಡಲು ವಿಫಲವಾಗಿದೆ. ಜನರು ಐ.ಟಿ., ಬಿ.ಟಿ.ಯಂತಹ ವಾಣಿಜ್ಯ ನಗರ ಬೆಂಗಳೂರನ್ನು ತೊರೆಯುತ್ತಿದ್ದಾರೆ.

Contact Your\'s Advertisement; 9902492681

ಸರಕಾರದಲ್ಲಿರುವ 8 ಸಚಿವರುಗಳು ಮತ್ತು ಅಧಿಕಾರಿಗಳು ಪತ್ರಿಕೆಗಳಲ್ಲಿ ,ಮಾಧ್ಯಮಗಳಲ್ಲಿ ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಪ್ರಚಾರವನ್ನು ಗಿಟ್ಟಿಸುವುದರಲ್ಲಿ ಮಗ್ನವಾಗಿದ್ದಾರೆ ಜನರ ಬಗ್ಗೆ ಯಾವುದೆ ಕಾಳಜಿ ಇಲ್ಲದೆ ಬಂಡವಾಳ ಶಾಹಿ ಮತ್ತು, ಶ್ರೀಮಂತರ ಪರ ಇರುವ ಸರಕಾರವಾಗಿದೆ. ಸಾಮಾನ್ಯ ಜನರ ತುರ್ತು ಆರೋಗ್ಯ ಪರಿಸ್ಥಿತೀಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮಾನ್ಯ ಜನರು ಮತ್ತು ಬಡವರು ಆರೋಗ್ಯ ಚಿಕೆತ್ಸೆಯಿಂದ ವಂಚಿಸಲ್ ಪಟ್ಟಿದ್ದಾರೆ.

ಹೈಟೆಕ್ ಆಸ್ಪತ್ರೆ ಗಳಲ್ಲಿ ಚಿಕೆತ್ಸೆ ಪಡೆಯುವ ಶ್ರೀಮಂತರನ್ನು ನೋಡಿ ಅಧಿಕಾರಿಗಳು ಮತ್ತು ಸಚಿವರು ರೋಗ ಹತೋಟಿಯಲ್ಲಿ ಇದೆ ಎಂದು ಹೇಳಿಕೆಗಳನ್ನು ನೀಡುತ್ತಿರುವುದೆ ಹೊರತು ಬಡವರು, ಮಧ್ಯಮ ವರ್ಗದವರು ಚಿಕಿತ್ಸೆ ದೊರೆಯದೆ ದಿನಾ ಸಾವುಗೀಡಾಗುತ್ತಿರುವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಜನರು,ಆರ್ಥಿಕ ಪರಿಸ್ಥಿತೀ ಹದಗೆಟ್ಟಿರುವುದರಿಂದ ಮತ್ತು ರೋಗದಿಂದಾಗಿ ಭಯಬೀತರಾಗಿದತದ್ದು ಸರಕಾರದ ವಿರುಧ್ದ ರೊಸಿ ಹೋಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಅವರ ಸಚಿವರುಗಳು ಕಮಿಷನ್ ದಂದೆಯಲ್ಲಿ ಕಾಲಹರಣ ಮಾಡುವುದಲ್ಲದೆ ಪಿ.ಪಿ.ಇ.ಕಿಟ್. ಸ್ಯಾನಿಟೈಸರ್ ,ಗ್ಲೌಸ್, ಮಾಸ್ಕ್, ಔ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here