ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶ್ರೀ ಪ್ರಭು ಮಹಾವಿದ್ಯಾಲಯ

0
31

ಸುರಪುರ: ನಗರದ ಶ್ರೀ ಪ್ರಭು ಕಲಾ ವಿಜ್ಞಾನ ಹಾಗೂ ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ೨೦೧೯-೨೦ ನೆ ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಉತ್ತಮ ಸಾಧನೆ ಮಾಡಿದೆ.

ಕಲಾ ವಿಭಾಗದಲ್ಲಿ ೨ ಡಿಸ್ಟಿಂಗಶನ್, ೧೨ ಪ್ರಥಮ ದರ್ಜೆ, ೮ ದ್ವಿತೀಯ ದರ್ಜೆ ಹಾಗೂ ೬ ಪಾಸ್ ದರ್ಜೆ ಒಟ್ಟು ೬೨.೨೨ % ಪ್ರತಿಶತ, ವಿಜ್ಞಾನ ವಿಭಾಗದಲ್ಲಿ ೨ ಡಿಸ್ಟಿಂಗಶನ್, ೨೬ ಪ್ರಥಮ ದರ್ಜೆ, ೫ ದ್ವಿತೀಯ ದರ್ಜೆ ಹಾಗೂ ೩ ಪಾಸ್ ದರ್ಜೆ ಒಟ್ಟು ೮೦.೦೦ % ಪ್ರತಿಶತ, ವಾಣಿಜ್ಯ ವಿಭಾಗದಲ್ಲಿ ೪ ಡಿಸ್ಟಿಂಗಶನ್, ೩೦ ಪ್ರಥಮ ದರ್ಜೆ, ೧೦ ದ್ವಿತೀಯ ದರ್ಜೆ ಹಾಗೂ ೩ ಪಾಸ್ ದರ್ಜೆ ಒಟ್ಟು ೭೮.೩೩ % ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಕಾಲೇಜಿನ ಫಲಿತಾಂಶ ೮ ಡಿಸ್ಟಿಂಗಶನ್, ೬೮ ಪ್ರಥಮ ದರ್ಜೆ, ೨೩ ದ್ವಿತೀಯ ದರ್ಜೆ ಹಾಗೂ ೧೨ ಪಾಸ್ ದರ್ಜೆ ಒಟ್ಟು ೭೩.೫೨ % ಪ್ರತಿಶತ ಫಲಿತಾಂಶದ ಸಾಧನೆ ಮಾಡಿದೆ.

Contact Your\'s Advertisement; 9902492681

ಉತ್ತಮವಾದ ಫಲಿತಾಂಶ ಕಂಡು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷರಾದ ಡಾ. ಶಿವಾನಂದ ದೇವರಮನಿ, ಕಾರ್ಯದರ್ಶಿ ಶ್ರೀ ನಿತಿನ್ ಬಿ. ಜವಳಿ ಹಾಗೂ ಜಂಟಿ ಕಾರ್ಯದರ್ಶಿ ಡಾ. ಗಂಗಾಧರ ಡಿ. ಎಲಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಆಢಳಿತಾಧಿಕಾರಿಗಳು, ವಿಶೇಷಾಧಿಕಾರಿಗಳು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಮ್.ಡಿ ವಾರಿಸ್, ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಗಮೇಶ ಎಚ್. ಹೊಸಮನಿ, ಉಪಪ್ರಾಚಾರ್ಯರಾದ ಪ್ರೊ. ವೇಣುಗೋಪಾಲ ನಾಯಕ ಜೇವರ್ಗಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here