ಕೋವಿಡ್ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಿ: ರಾಜುಗೌಡ

0
23

ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಿಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಮತ್ತು ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳ ಸಭೆಯನ್ನು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಇಂದು ಇಡೀ ನಾಡಿನಲ್ಲಿ ಕೋವಿಡ್-೧೯ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ.ಜನರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಅಭಿವೃಧ್ಧಿಗೆ ಹಿನ್ನಡೆಯಾಗದಂತೆ ಕ್ರಮವಹಿಸಿದೆ.ಇದನ್ನು ಅರಿತುಕೊಂಡು ಎಲ್ಲಾ ಪಂಚಾಯತಿಗಳ ಆಡಳಿತಾಧಿಕಾರಿಗಳು ಮತ್ತು ಅಭಿವೃಧ್ಧಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ ಕಾಳಜಿವಹಿಸಿ ಕೆಲಸ ಮಾಡಬೇಕು.

Contact Your\'s Advertisement; 9902492681

ಅಲ್ಲದೆ ಕೊರೊನಾ ವೈರಸ್ ಕುರಿತು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿ ಮತ್ತು ಪಂಚಾಯತಿ ಸಿಬ್ಬಂದಿ ಆಯಾ ಗ್ರಾಮಗಳಲ್ಲಿನ ಜನರೊಂದಿಗೆ ಬೆರೆತು ಸಾಮಾಜಿಕ ಅಂತರ,ಮಾಸ್ಕ್ ಧರಿಸುವುದು ಹಾಗು ಸ್ಯಾನಿಟೈಜರ್ ಅಥವಾ ಸಾಬೂನಿನಿಂದ ಕೈ ತೊಳೆಯುವುದು ಸೇರಿದಂತೆ ವೈರಸ್ ಹರಡದಂತೆ ಕ್ರಮಕ್ಕೆ ಜಾಗೃತಿ ಸಭೆಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಹಾಗು ಎಲ್ಲಾ ಪಂಚಾಯತಿಗಳ ಆಡಳಿತಾಧಿಕಾರಿಗಳು ಹಾಗು ಅಭಿವೃಧ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here