‘ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ’

0
86

ಕಲಬುರಗಿ: ಛಲ ಇದ್ದರೆ ಅಂಗವೈಕಲ್ಯವು ಯಾವ ಸಾಧನೆಗೂ ಅಡ್ಡಿ ಮಾಡುವುದಿಲ್ಲ. ಸಾಮಾನ್ಯರಂತೆಯೇ ವಿವಿಧ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಿರುವ ಅಂಧ ಬಾಲಕ-ಸಾಧಕ ಸುಭೋಧ ಹುಲಿಕಂಠರಾಯ ಅರಳಗುಂಡಗಿ ಅವರು ಇತರರಿಗೆ ಮಾದರಿ ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಬಿಶಪ್ ಕಾಟನ್ ಸ್ಕೂಲ್‌ನಲ್ಲಿ ಅಂತರಾಷ್ಟ್ರೀಯ ಪಠ್ಯಕ್ರಮದಲ್ಲಿ ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾಗಿ ಕಲ್ಯಾಣ ನಾಡಿಗೆ ಕೀರ್ತಿ ತಂದುಕೊಟ್ಟ ಅಂಧ ವಿದ್ಯಾರ್ಥಿ ಸಾಧಕ ಸುಭೋಧ ಹುಲಿಕಂಠರಾಯ ಅವರನ್ನು ಇಲ್ಲಿನ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.

Contact Your\'s Advertisement; 9902492681

ಯುವ ಮುಖಂಡ ಪ್ರೊ.ಯಶವಂತರಾಯ ಅಷ್ಠಗಿ ಮಾತನಾಡಿ, ಜ್ಞಾನ ಯಾರೋಬ್ಬರ ಸ್ವತ್ತಲ್ಲ. ಜ್ಞಾನದ ಸಂಪಾದನೆಯನ್ನು ಯಾರು ಕೂಡ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಾಧಕಸುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಪೋಷಕರು ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಿ ಕಲಿಯುವ ವಾತಾವರಣ ಸೃಷ್ಠಿಸಬೇಕು ಎಂದು ಹೇಳಿದರು.

ಬಳಗದ ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಭುವನೇಶ್ವರಿ ಹಳ್ಳಿಖೇಡ, ಬಿ.ಎಂ.ಪಾಟೀಲ ಕಲ್ಲೂರ, ಶರಣಬಸಪ್ಪ ಪಾಟೀಲ ಹಿತ್ತಲಶಿರೂರ, ಸತೀಶ ಸಜ್ಜನಶೆಟ್ಟಿ, ಪ್ರಭವ ಪಟ್ಟಣಕರ್, ಶಿವಾನಂದ ಡೋಮನಾಳ, ಸುರೇಶ ವಗ್ಗೆ, ಬಿ.ವಿ.ಗಣಾಚಾರಿ, ಮುಖಂಡ ಹುಲಿಕಂಠರಾಯ ಅರಳಗುಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here