ಮಳಖೇಡದ ಆದಿತ್ಯಾ ಬಿರ್ಲಾ ಶಾಲೆಗೆ ಉತ್ತಮ ಸಾಧನೆ

0
126

ಕಲಬುರಗಿ: ಮಳಖೇಡನ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ಆದಿತ್ಯಾ ಬಿರ್ಲಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್ಇ ಹತ್ತನೇ ತರಗತಿಯಲ್ಲಿ ಪರೀಕ್ಷೆ ಗಮನಾರ್ಹ ಸಾಧನೆ ಮಾಡಿದ್ದಾರೆ.

ಒಟ್ಟು 62 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಡಿಸ್ಟಿಂಗಷನ್, 26 ವಿದ್ಯಾರ್ಥಿಗಳು ಪ್ರಥಮ, 13 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ದಿವ್ಯಾಂಶ ಮಿಶ್ರಾ ಶೇ. 94.40 ಅಂಕ ಪಡೆದು ಶಾಲೆಗೆ ಪ್ರಥಮ, ಅಂಕಿತವೀರಸಿಂಗ್ ರಾಠೋಡ ಶೇ. 90.8 ಅಂಕ ಪಡೆದ ದ್ವಿತೀಯ ಸ್ಥಾನ ಹಾಗೂ ವರುಣ ಹದನೂರ ಶೇ. 89.40 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ, ಆಡಳಿತ ಮಂಡಳಿ ಪ್ರಾಚಾರ್ಯ ರಿಂಕು ಬ್ಯಾನರ್ಜಿ, ಉಪ ಪ್ರಾಚಾರ್ಯ ಟೋಮಿ ಸಿರಿಯಾ, ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here