ಶ್ರಾವಣ ಮಾಸದ ಪುರಾಣ ಪ್ರವಚನ ರದ್ದು: ಶಿವರಾಜ ಅಂಡಗಿ

0
42

ಕಲಬುರಗಿ: ಇಂದು ಬೆಳಿಗ್ಗೆ ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರ ವೇಲಫೇರ ಸೊಸೈಟಿಯ ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಾಲಯಲ್ಲಿ ಈ ವರ್ಷ ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರವಚನ ಕಾರ್ಯಕ್ರಮಗಳು ರದ್ದು ಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿರುಗಾಳಿಯಂತೆ ಹಬ್ಬುತಿರುವ ಹೆಮ್ಮಾರಿ ಕೊರೊನ ವೈರಸ್ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಮುಂಜಾಗ್ರತೆಯ ಮದ್ದು ಎಂಬಂತೆ ಗುಡಿ,ಗುಂಡಾರಗಳಲ್ಲಿ ಸಭೆ, ಸಮಾರಂಭ ಮಾಡಬಾರದು ಎಂಬ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಸುಮಾರು 80 ಗಿಂತಲೂ ಹೆಚ್ಚು  ಮನೆಗಳಿರುವ ನಮ್ಮ ಕಾಲೊನಿಯಲ್ಲಿ ಜನರಲ್ ಬೂಡಿ ಮೀಟಿಂಗ್ ಕರೆಯದೆ ಕೇವಲ ಕೆಲವೇ ಸೊಸೈಟಿಯ ಪ್ರಮುಖ ಮುಂಖಡರು ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸದರಿ ನಿರ್ಧಾರ ಕೈಗೊಂಡರು.

Contact Your\'s Advertisement; 9902492681

ಸುಮಾರು 25 ವರ್ಷಗಳಿಂದ ಪ್ರತಿ ವರ್ಷ 15 ರಿಂದ 20 ವಿವಿಧ ಬಡಾವಣೆಯ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಬಹಳ ವಿಜ್ರಂಮಣೆಯಿಂದ ಆಚರಿಸುತ್ತಿರುವ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಗುಡಿಯ ಭಕ್ತರ ಹಿತದ್ರಷ್ಟಿಯಿಂದ ಇಂತಹ ಕಠಿಣವಾದ ನಿರ್ಧಾರ ಕೈಗೊಂಡಿದ್ದೆವೆ ಎನುತ್ತಾ ಇದೊಂದು ಸೊಸೈಟಿಯ ಇತಿಹಾಸದಲ್ಲಿಯೇ ದಾಖಲೆ ಎಂದು ತಿಳಿಸಿದ ಅಂಡಗಿ ಅವರು ಸೊಸೈಟಿಯ ಸದಸ್ಯರಿಗೂ ಹಾಗೂ ಸುತ್ತಮುತ್ತಲಿನ ಬಡಾವಣೆಯ ಸಾವಿರಾರು  ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು  ಹೊಗಲು ಜೊತೆಗೆ ನಿಮ್ಮ ನಿಮ್ಮ ಮನೆಯಲ್ಲಿಯೇ ದೇವರಿಗೆ ಸ್ಮರಿಸಿ ನಮಿಸಿ ಎಂದು ಮನವಿ ಮಾಡುತ್ತಾ ಸಾರ್ವಜನಿಕರಿಗೆ     ನಮ್ಮ ಗುಡಿಯ ದರ್ಶನ ನೀಷೆದಿಸಲಾಗಿದ್ದು ಗುಡಿಯ ನಾಲ್ಕು ದಿಕ್ಕಿನ ಗೇಟ್ಗಳಿಗೆ ಲಾಕ್ ಡೌನ್ ಮುಂದುವರಿಸಿದ ಕಾರಣ ಸಹಕರಿಸಲು ಮನವಿ ಮಾಡಿದ್ದಾರೆ.

ಸೊಸೈಟಿಯ ಅದ್ಯಕ್ಷ ಮಲ್ಲಿನಾಥ ದೇಶಮುಖ  ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಉಮೇಶ ಶಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಸೊಸೈಟಿಯ ಜಮಾ-ಖರ್ಚಿನ ಲೆಕ್ಕಪತ್ರದ ಬಜೆಟ್ ಮಂಡಿಸಿದರು.

ಸೊಸೈಟಿಯ ಪ್ರಮುಖ ಮುಂಖಡರಾದ ಅಣವೀರಪ್ಪ ಮುಗಳಿ, ಬಸವಂತರಾವ ಜಾಬಶಟ್ಟಿ , ಮಲ್ಲಿಕಾರ್ಜುನ ನಾಗಶಟ್ಟಿ ,  ಶಾಂತಯ್ಯ ಬಿದಿಮನಿ, ಗುರುಲಿಂಗಯ್ಯ ಮಠಪತಿ, ಸುಭಾಷ್ ಮಂಠಾಳೆ, ಕಾಶಿನಾಥ ಚಿನ್ಮಳಿ, ವಿಶ್ವನಾಥ ರಟಕಲ್, ನಾಗಭೂಷಣ ಹಿಂದೂಡ್ಡಿ, ನಾಗರಾಜ ಹೆಬ್ಬಾಳ, ಉದಯಕುಮಾರ ಪಡಶಟ್ಟಿ, ಕರಣಕುಮಾರ ಆಂದೊಲಾ, ಶಿವಪುತ್ರಪ್ಪ ದಂಡೊತಿ, ತರುಣ ಶೇಖರ ಬಿರಾದಾರ, ಗುರುಲಿಂಗಪ್ಪ ಹರಸೂರ, ಶರಣಯ್ಯ ಗುಡಿ ಸ್ವಾಮಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here