ಆಳಂದ: ಸಂಪೂರ್ಣ ಶೋಷಿತ ಜನಾಂಗಕ್ಕೆ ದಾರಿ ದೀಪವಾದ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕ್ರರ್ ರವರ ಜೀವನ ಆಧಾರಿತ “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂಬ ಧಾರಾವಾಹಿಯು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಅದೇ ಸಮಯದಲ್ಲಿ ನಿಂಬರ್ಗಾ ಗ್ರಾಮದಲ್ಲಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಸುತ್ತಮುತ್ತಲಿನ ಹಳ್ಳಿಯಲ್ಲಿರುವ ಡಾ. ಅಂಬೇಡ್ಕರ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗುತ್ತಿದೆ. ಕೂಡಲೆ ಉದ್ದೇಶಪೂರ್ವಕವಾಗಿ ವಿದ್ಯುತ್ತ ಕಡಿತ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜೈಭೀಮ ಬಿಲ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಳಂದ ತಾಲೂಕಿನ ನಿಂಬರ್ಗಾ ಕೆ.ಇ.ಬಿ ಶಾಖಾಧಿಕಾರಿಗಳಿಗೆ ಮಹಾಪುರು?ರ ವಿಚಾರ ವೇದಿಕೆಯ ಸದಸ್ಯರು ಮನವಿ ಸಲ್ಲಿಸಿ, ಶ್ರೀಕಾಂತ ಗಾಯಕವಾಡ ಮಾತನಾಡುತ್ತ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ ಧಾರಾವಾಹಿ ಪ್ರಸಾರ ಆರಂಭವಾಗುವ ಸಂಧರ್ಭದಲ್ಲಿಯೆ ವಿದ್ಯುತನ್ನು ಕಡಿತ ಗೊಳಿಸಲಾಗುತ್ತಿದೆ, ಜೆಸ್ಕಾಂ ಕಛೇರಿಗೆ ಕರೆ ಮಾಡಿ ವಿಚಾರಿಸಿದರೆ ಬೇಜವ್ದಾರಿಯಾದಂತ ಉತ್ತರ ನೀಡುತ್ತಿರುವಿರಿ ಆದರಿಂದ ಇದು ಉದೇಶ ಪೂರ್ವಕವಾಗಿಯೆ ವಿದ್ಯುತ್ತ ಕಡಿತಗೊಳಿಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದರು.
ಶೋಷಿತ ಸಮುದಾಯಗಳ ಏಳ್ಗೆಗಾಗಿಯೇ ತಮ್ಮ ಜೀವನವನೇ ಮುಡಿಪಾಗಿಟ್ಟ ಡಾ.ಬಾಬಾಸಾಹೇಬ ಅಂಬೇಡ್ಕ್ರರ್‌ವರ ಜೀವನ ಆಧಾರಿತ ಕಥೆಯನ್ನು ಧಾರಾವಾಹಿಯ ಕನ್ನಡ ಭಾ?ಯ ರೂಪದಲ್ಲಿ ಮೂಡಿಬರುತ್ತಿದ್ದು ಅದರಲ್ಲಿ ಗ್ರಾಮೀಣ ಜನರಿಗೆ ಅವರ ಹೋರಾಟದ ಕುರಿತು ಅರಿತುಕೊಳ್ಳಲು ಸಹಕಾರಿಯಾಗಿದೆ. ಚಿಕ್ಕಮಕ್ಕಳಿಗೆ ಬಾಬಾಸಾಹೇಬ ಅಂಬೇಡ್ಕ್ರ ರವರು ಜೀವನದ ಉದ್ದಗಲಕ್ಕೂ ಪಟ್ಟಿರುವ ಕ?, ನೋವುಗಳ ಬಗ್ಗೆ ತಿಳಿಯದೆ ಇರುವಂತ ಜನರಿಗೆ ಈ ಧಾರಾವಾಹಿಯ ಮೂಲಕ ತಿಳಿದುಕೊಳ್ಳಲು ಅನುಕೂಲವಾಗುತ್ತಿದೆ.
ಆದರೆ ಪದೇ, ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಡಾ.ಅಂಬೇಡ್ಕ್ರರ್ ಸಂದೇಶವನ್ನು ಜನರೀಗೆ ತಲುಪದೆ ಇರುವ ಹಾಗೆ ?ಡ್ಯಂತ್ರ ನಡೆಯುತ್ತಿದೆ ಎಂದು ಮಹಾಪುರು?ರ ವಿಚಾರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಜಿಡಗಿ ಆಕ್ರೋಶವನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ವಿದ್ಯುತ್ ಕಡಿತಗೊಳ್ಳದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಸಂವಿಧಾನ್ಮತಕವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಈಶ್ವರ ಭೂಯಿನ್, ಶಶಿಧರ ನವರಂಗ, ಸತೀಶ ಮಂಗನ್, ಹ?ವರ್ಧನ ಸಂಗೋಳಗಿ, ಈಶ್ವರ ಮೇಲಕೇರಿ, ಪ್ರಭಾಕರ್ ಬಿಲ್ಕರ್, ಅಂಕುಶ ನಿರ್ಮಲ್ಕರ್, ರವಿ ವರ್ಮಾ ಖರ್ಚನ್, ಪ್ರವೀಣ ಕೂಣ, ಅವಿನಾಶ, ಸುರೇಶ, ಆಕಾಶ, ಸತೀ?, ಅಂಬೇಡ್ಕರ್, ಸುಧಾಕರ್, ಸಚಿನ್ ಚಕ್ರವರ್ತಿ ಇದ್ದರು.