ಹುತ್ತಕ್ಕೆ ಹಾಲಿನ ಅಭಿಷೇಕ ಮಾಡದೆ ಅಪೌಷ್ಟಿಕ ಮಕ್ಕಳಿಗೆ ವಿತರಿಸಲು: ಸಂತೋಷ ಮೇಲ್ಮನಿ ಕರೆ

0
66

ಕಲಬುರಗಿ: ನಾಗರ ಪಂಚಮಿ ಹಬ್ಬದಂದು ಲಕ್ಷಾನುಗಟ್ಟಲೆ ಹಾಲು ಕಲ್ಲು ನಾಗರಕ್ಕೆ ಹಾಗೂ ಹುತ್ತಕ್ಕೆ ಹಾಕುವುದರ ಮೂಲಕ ಪೋಲು ಮಾಡುವುದರ ಜೊತೆಗೆ ಕಂದಾಚಾರ ಮತ್ತು ಮೌಢ್ಯಕ್ಕೆ ಪುಷ್ಟಿ ನೀಡಿದಂತಾಗುತದೆ ಆದ್ದರಿಂದ ಇಂತಹ ಆಚರಣೆಗಳು ನಿಲ್ಲಬೇಕು, ಪ್ರತಿವರ್ಷ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪುತಿದ್ದು ಹಬ್ಬದ ಆಚರಣೆಗಳು ದೇವರ ಉತ್ಸವಗಳಲ್ಲಿ ಹಾಲಿನಿ ಅಭಿಷೇಕ ಮಾಡಿ ಹಾಲನ್ನು ಪೋಲು ಮಾಡುವ ಬದಲು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಹಾಲನು ವಿತರಣೆ ಮಾಡಬೇಕೆಂದು ದಲಿತ ಯುವ ಮುಖಂಡ ಸಂತೋಷ ಮೇಲ್ಮನಿ ಕರೆ ನೀಡಿದರು.

ಶುಕ್ರವಾರ ರಿಪಬ್ಲಿಕನ್ ಯುತ್ ಫೇಡರೇಶನ ಕಲಬುರಗಿ, ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ ಕಲಬುರಗಿ, ವಿದ್ಯಾರ್ಥಿ ಬಂಧುತ್ವ ವೇದಿಕೆ ಕಲಬುರಗಿ ಮತ್ತು ಮಾನವ ಬಂಧುತ್ವ ವೇದಿಕೆ ಕಲಬುರಗಿ ವತಿಯಿಂದ ನಾಗರಪಂಚಮಿ ಹಬ್ಬದ ನಿಮಿತ್ಯ ಕಲಬುರಗಿ ನಗರದ ಕೇಂದ್ರ ಬಸ ನಿಲ್ದಾಣದ ಕಣ್ಣಿ ಮಾರ್ಕೇಟ ಹತ್ತಿರ ಇರುವ ಗುಡಿಸಲಲ್ಲಿ ವಾಸಿಸುವ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗರ ಪಂಚಮಿ ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಚಂದ್ರಶೇಖರ ಕಟ್ಟಿಮನಿ, ಹಣಮಂತ ಇಟಗಿ, ದಿನೇಶ ದೊಡಮನಿ, ನಾಗೇಂದ್ರ ಜವಳಿ, ಧರ್ಮಣ್ಣಾ ಕೋಣೆಕರ್, ಶಿವು ಜಾಲವಾದ, ಶಿವಕುಮಾರ ನಂದಿ, ರಾಣು ಮುದ್ದನಕರ್, ಮಹೇಶ ಬೆಡಜುರ್ಗಿ, ಸಿದ್ಧಾರ್ಥ ಚಿಂಚನಸೂರ, ರತನ ಕನ್ನಡಗಿ, ಪ್ರವೀಣ ಸಿಂಘೆ, ಸಂತೋಷ ಅಷ್ಟಗಿ ಮತ್ತು ಸಂಜೀವಕುಮಾರ ಸಿಂಗೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here