ಕವಿತಾಳ ಕೆರೆಗೆ ಸಿರವಾರ ತಹಶಿಲ್ದಾರ ಭೇಟಿ

0
36

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಹೊರಭಾಗದಲ್ಲಿರುವ ನಲವತ್ತು ಹೆಕ್ಟೇರ್ ಕೆರೆಯು ಸರ್ಕಾರಕ್ಕೆ ಸೇರಿದ್ದು ಆದರೆ ಇದನ್ನು ಪಟ್ಟಣದ ಕೆಲವು ಭೂ ಮಾಲೀಕರು ಆಕ್ರಮಿಸಿಕೊಂಡು ಬಹುದಿನಗಳಿಂದ ತಮ್ಮ ಹೆಸರಿಗೆ ಪಟ್ಟ, ಪಹಣಿ ಪತ್ರಿಕೆ ಮಾಡಿಸಿಕೊಂಡಿರುತ್ತಾರೆ. ಮತ್ತು ಸಣ್ಣ ನೀರಾವರಿ ಇಲಾಖೆ ಇದು ತಮಗೆ ಸೇರಿದ್ದು ಎಂದು ಇಲ್ಲಿ ಮೀನು ಸಾಗಾಣಿಕೆಗಾಗಿ ಪ್ರತಿವರ್ಷ ಹರಾಜನ್ನು ನಡೆಸುತ್ತಾ ಬರುತ್ತಿದೆ ಕೆರೆಯು ಸರ್ಕಾರದ್ದೆ ಅಥವಾ ಖಾಸಗಿದ್ದೊ ಎಂದು ಸ್ಪಷ್ಟಪಡಿಸಬೇಕು ಹಾಗೂ ಈಗ ಸುಮಾರು 84 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯು ಕಳಪೆ ಮಟ್ಟದಿಂದ ನಡೆಯುತ್ತದೆ ಈ ಕಳಪೆ ಕಾಮಗಾರಿಗೆ ಮುಂದಾದ ಗುತ್ತಿಗೆದಾರರ ಮತ್ತು ಸಹಕಾರ ನೀಡುತ್ತಿರುವ ಸಂಬಂಧಿಸಿ ಅಧಿಕಾರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸದ್ದರು.

ಕಳೆದವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿವೈಎಫ್ಐ ಮತ್ತು ಕವಿತಾಳ ನವ ನಿರ್ಮಾಣ ವೇದಿಕೆ ವತಿಯಿಂದ ಸುದ್ದಿಗೋಷ್ಠಿಯನ್ನು ಮಾಡಲಾಗಿತ್ತು ಇದಕ್ಕೆ ಸ್ಪಂದಿಸಿದ ಸಿರವಾರ ತಹಸಲ್ದಾರರಾದ ಶೃತಿ ರವರು ಇಂದು ಕೆರೆಗೆ ಭೇಟಿ ನೀಡಿ ಕೆರೆ ಸ್ಥಳವನ್ನು ಪರಿಶೀಲಿಸಿದರು ನಂತರ ಮಾತನಾಡಿದ ಅವರು ಕರೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಯನ್ನು ಪರಿಶೀಲಿಸಿ ಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ಮೇಲಾಧಿಕಾರಿ ಹಾಗೂ ಇಲಾಖೆಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜ್ಯ SFI ರಾಜ್ಯ ಉಪಾಧ್ಯಕ್ಷ ಹಾಗೂ ಕವಿತಾಳ ನವನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಮುಖಂಡರಾದ ಲಿಂಗರಾಜ್ ಕಂದಗಲ್, ಗುರುರಾಜ, ಶಾಂತ ಕುಮಾರ್, ಗ್ರಾಮ ಲೆಕ್ಕಿಗ ಸದಾಕಾಲಿ, ಸಿಬ್ಬಂದಿ ಅನೀಲ್ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here