ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಾರ್ವಜನಿಕರ ಸೇವೆ ಸಲ್ಲಿಸಿ-ಡಾ.ಅಹ್ಮದ್ ಪಟೇಲ್

0
110

ಶಹಾಬಾದ:ಸಾರ್ವಜನಿಕರ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನಿಮ್ಮ ಭಾಗ್ಯ. ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾಗಿ ನಿಮಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಾಲೂಕಿನ ಜನತೆಗೆ ಸರಿಯಾದ ಸೇವೆ ಸಲ್ಲಿಸಬೇಕೆಂದು ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಹೇಳಿದರು.
ಅವರು ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿಯಾಗಿದ್ದ ಪಿ.ಎಮ್.ಸಜ್ಜನ್ ವಯೋನಿವೃತ್ತಿ ನಂತರ ಡಾ.ರಹೀಮ್ ಅವರು ಅಧಿಕಾರ ಸ್ವೀಕರಿಸಿದ್ದರಿಂದ ಅವರಿಗೆ ನಗರದ ನಾಗರಿಕರಿಂದ ಸನ್ಮಾನಿಸಿ ಮಾತನಾಡಿದರು.
ಕೊರೊನಾ ಮಹಾಮಾರಿ ರೋಗ ನಗರದಲ್ಲಿ ಹರಡುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಗೊಳ್ಳಿ.ಸಣ್ಣ ಪುಟ್ಟ ರೋಗಗಳಿಗೂ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ನೋಡುತ್ತಿಲ್ಲ.ಅದರಲ್ಲೂ ಸಾಮನ್ಯ ನೆಗಡಿ, ಕೆಮ್ಮ, ಜ್ವರ ಬಂದರೂ ಕಲಬುರಗಿಯಲ್ಲೂ ಯಾವ ವೈದ್ಯರು ಹಿಡಿಯುತ್ತಿಲ್ಲ.ಇದರಿಂದ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಆದ್ದರಿಂದ ಆರೋಗ್ಯ ಕೇಂದ್ರದ ಜವಾಬ್ದಾರಿ ಹೊತ್ತಿರುವ ತಾವು ಆದಷ್ಟು ಸಿಬ್ಬಂದಿ ವರ್ಗದವರಿಗೆ ಕೆಲಸದ ವೇಳೆಯಲ್ಲಿ ಎಲ್ಲೂ ಹೋಗದಂತೆ ನೋಡಿಕೊಂಡು ಆಸ್ಪತ್ರೆಗೆ ಬಂದ ರೋಗಿಗಳ ಸೇವೆ ಸಲ್ಲಿಸಲು ತಿಳಿಸಬೇಕೆಂದು ಹೇಳಿದರು.


ಸಮುದಾಯ ಆರೋಗ್ಯ ಕೇಂದ್ರ ಆಡಳಿತ ಅಧಿಕಾರಿ ಡಾ.ರಹೀಮ್ ಮಾತನಾಡಿ, ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ರೋಗಿಗಳು ಸಾಕಷ್ಟು ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಈ ಸಮಯದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ರೋಗಿಗಳನ್ನು ಉಪಚರಿಸಬೇಕು.ಇದು ನಮ್ಮ ಆದ್ಯ ಕರ್ತವ್ಯ. ಅಲ್ಲದೇ ಜನರು ನಮ್ಮನ್ನು ಎರಡನೇ ದೇವರೆಂದು ಕಾಣುತ್ತಾರೆ.ಆ ಭರವಸೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ನಗರಸಭೆಯ ಮಾಜಿ ಅಧ್ಯಕ್ಷ ಮಹ್ಮದ್ ರಫಿಕ್ ಕಾರೋಬಾರಿ, ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ಮಾಜಿ ನಗರಸಭೆಯ ಸದಸ್ಯರಾದ ಅನ್ವರ್ ಪಾಶಾ,ನಾಗಣ್ಣ ರಾಂಪೂರೆ,ದಿಲೀಪ್ ನಾಯಕ,ನಾಗರಾಜ ಕರಣಿಕ್,ದೇವರಾಜ ರಾಠೋಡ,ಮುನ್ನಾ ಪಟೇಲ್, ಶಕೀಲ್ ಇಂಗಳಗಿ, ಯುಸೂಫ್ ನಾಕೇದಾರ ಸೇರಿದಂತೆ ಅನೇಕ ಜನರು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here