ಶೈಕ್ಷಣಿಕ ರಂಗದ ಬೆನ್ನೆಲುಬಾಗಿ ನಿಂತಿದ್ದ ಮಹನಿಯರು ರಾಜಾ ಮದನಗೋಪಾಲ ನಾಯಕರು: ಡಾ. ಉಪೇಂದ್ರ ನಾಯಕ

0
95

ಸುರಪುರ: ತಾಲೂಕಿನ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಬಯಸಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಾಲೂಕಿನ ಶೈಕ್ಷಣಿಕ ರಂಗದ ಬೆನ್ನೆಲುಬಾಗಿ ನಿಂತಿದ್ದ ಮಹನಿಯರು ರಾಜಾ ಮದನಗೋಪಾಲ ನಾಯಕರು ಎಂದು ಉಪನ್ಯಾಸಕ ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿದರು.

ನಗರದ ಶ್ರೀ ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ಮೆಚ್ಚಿನ ಸಾಂಸ್ಕøತಿಕ ರಾಯಬಾರಿಯನ್ನು ಕಳೆದುಕೊಂಡು ಇಂದಿಗೆ ಐದು ದಿನಗಳಾಗಿದೆ.ಅವರ ನೆನಪು ಸದಾ ಕಾಡುತ್ತಿದೆ.ಅವರು ನಮ್ಮ ತಾಲೂಕಿನ ಅಭೀವೃಧ್ಧಿಗೆ ನೀಡಿದ ಕೊಡುಗೆ ಅಪಾರವಾಗಿದೆ.

Contact Your\'s Advertisement; 9902492681

ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಸಂರ ಅವರ ಅಚ್ಚುಮೆಚ್ಚಿನ ರಂಗವಾಗಿತ್ತು.ವಿದ್ಯಾರ್ಥಿಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು,ಸಂಗೀತ ಕಾರ್ಯಕ್ರಮಗಳು,ದಸರಾ ಹಬ್ಬ ಬಂದರೆ ವಿದ್ಯಾರ್ಥಿಗಳ ಹಬ್ಬದಂತೆ ಭಾಸವಾಗುತ್ತಿತ್ತು.ಅವರು ನಿರ್ಮಿಸಿದ ಗರುಡಾದ್ರಿ ಕಲಾ ಮಂದಿರ ಇಡೀ ನಾಡಿಗೆ ಗರುಡಾದ್ರಿ ಕಲೆಯ ಕುರಿತು ಪರಿಚಯಿಸಿದೆ.ಇನ್ನು ಸುರಪುರದ ಇತಿಹಾಸದ ಬಗ್ಗೆಯು ಹೆಚ್ಚಿನ ಕಾಳಜಿ ತೋರಿದ್ದ ಮಾಜಿ ಸಚಿವರು ಇಲ್ಲಿಯ ಕಲೆ ಸಾಹಿತ್ಯ ಮತ್ತು ಸಂಸ್ಕರತಿಯನ್ನು ಎತ್ತಿ ಹಿಡಿಯುವಲ್ಲಿ ಮೊದಲಿಗರು.ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಉಪನ್ಯಾಸಕ ಶರಣು ನಾಯಕ,ಕುಮಾರ ನಾಯಕ,ಶಿಕ್ಷಕ ಮಲ್ಲಿಕಾರ್ಜುನ ಕುಲಕರ್ಣಿ,ಬಿ.ಜಿ.ನಾಯಕ,ನಿಂಗಣ್ಣ ಕುಂಬಾರ,ಕ್ಯಾತಪ್ಪ ಮೇದಾ,ಶ್ರೀಕಾಂತ ಮೇದಾ,ಶರಣು ಮೇದಾ, ರಾಮು ಮೇದಾ, ಕುಮಾರ ನಾಯಕ ಡೊಣ್ಣಿಗೇರಾ,ಶರಣು ನಾಯಕ ರಾಮ್ ಸೇನಾ,ಹಯ್ಯಾಳಪ್ಪ ರಾಮ್ ಸೇನಾ,ಹನುಮಂತ ಸಿಂಗೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here