ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕಾಂಗ್ರೆಸ್ ಶ್ರಮ: ಡಿ.ಕೆ. ಶಿವಕುಮಾರ

0
100

ಕಲಬುರಗಿ: ರಾಜ್ಯ ಸರಕಾರ ಕೊರೋನ ಹೆಣಗಳಿಂದ ಹಣ ಮಾಡಲು ಹೊರಟಿದೆ. ಸರಕಾರದ ವಿರುದ್ದ‌ ಕಾಂಗ್ರೆಸ್ ಹಿರಿಯ‌ ನಾಯಕರು ಲೆಕ್ಕ ಕೇಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇ ಪ್ರಯುಕ್ತ ಮಂಗಳೂರು ಹಾಗೂ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡು ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಹೇಳಿದರು.

ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯದಂತೆ ಸಿಎಂ ಯಡಿಯೂರಪ್ಪ ಎರಡು‌ಸಲ ಅನುಮತಿ‌ ನಿರಾಕರಿಸಿದರು. ಹಾಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಅಂದು‌ ಕಾರ್ಯಕರ್ತರಿಗೆ ತಲುಪಿದೆ. ನನ್ನೊಂದಿಗೆ ಪ್ರತಿಜ್ಞೆ ಸ್ವೀಕರಿಸಿದವರಿಗೆ ಧನ್ಯವಾದ ಅರ್ಪಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ ಅವಿರತ ಶ್ರಮವಿದೆ. ಈ ಭಾಗದಲ್ಲಿ‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರ್ಮಸಿಂಗ್ ಅವರ ಚಿಂತನೆ ಹಾಗೂ ದೂರದೃಷ್ಟಿತ್ವ ಕಾರಣವಾಗಿದೆ ಎಂದರು.

ಕಾಂಗ್ರೆಸ್ ಅಭಿವೃದ್ದಿ ಪರವಾಗಿದೆ ಇದನ್ನು ಯಾರೂ ಅಲ್ಲಗಳೆಯಲಾಗಲ್ಲ. ಮೆಡಿಕಲ್ ಇಂಜೀನಿಯರಿಂಗ್ ಕಾಲೇಜು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೊರತು ಬಿಜೆಪಿ ಅಧಿಕಾರದಲ್ಲಿ‌ ಇರುವಾಗ ಅಲ್ಲ. ಇತಿಹಾಸವನ್ನು ಯಾರಿಂದಲೂ ಬದಲಿಸಲಾಗಲ್ಲ ಎಂದರು.

ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಕೊರೋನದಿಂದ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ ಪಕ್ಷ ತಲುಪಲಿದೆ ಎಂದ ಶಿವಕುಮಾರ, ಕೊರೋನಾ ನೆಪದಲ್ಲಿ‌ ಕೋಟಿಗಟ್ಟಲೇ ಲೂಟಿ‌ ಆಗ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಸರಕಾರದವರು ಕಿತ್ತಾಟ ನಿಲ್ಲಿಸಿ ಮೊದಲು ರೋಗಿಗಳಿಗೆ ಸೌಲಭ್ಯ ಕೊಡಲಿ ಎಂದರು.

ಪಕ್ಷದ‌ ಕಾರ್ಯಕರ್ತರು ಒಗ್ಗಟ್ಟಿನಿಂದ‌ ಕೆಲಸ ಮಾಡಿ ನನ್ನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಅವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here