ಹಾಳಾದ ದೇವಾಪುರ ಮನಗೂಳಿ ರಸ್ತೆ: ಶಾಸಕ ರಾಜುಗೌಡರ ಮುತುವರ್ಜಿಗೆ ದುರಸ್ಥಿ ಕಾರ್ಯ ಆರಂಭ

0
22

ಸುರಪುರ: ಕಳೆದ ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡು ಕೆಲವೇ ತಿಂಗಳುಗಳಲ್ಲಿ ನಿಂತಿದ್ದ ದೇವಾಪುರ ಮನಗೂಳಿ ರಸ್ತೆ ಕೆಸರು ಗದ್ದೆಯಂತಾಗಿತ್ತು.ಈ ರಸ್ತೆಯ ಮೂಲಕ ಹುಣಸಗಿ ತಾಳಿಕೋಟೆ ವಿಜಯಪುರ ಸೇರಿದಂತೆ ಅನೇಕ ಗ್ರಾಮಗಳಿಗೂ ತೆರಳುವ ಜನರು ನಿತ್ಯವು ನರಕಯಾತನೆ ಅನುಭವಿಸುವಂತಿತ್ತು.

ರಸ್ತೆ ಕಾಮಗಾರಿ ಆರಂಭಗೊಂಡ ಸಂದರ್ಭದಲ್ಲಿ ರಸ್ತೆಗೆ ಭೂಮಿ ನೀಡಿದ ರೈತರು ತಮಗೆ ಇನ್ನೂ ಪರಿಹಾರ ಧನ ಬಂದಿಲ್ಲವೆಂದು ಕಾಮಗಾರಿ ನಿಲ್ಲಿಸಿ ನಂತರ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.ಇದರಿಂದ ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಿಂತು ಇಡೀ ರಸ್ತೆಯಲ್ಲಿ ಆಳೆತ್ತರದ ತಗ್ಗು ಗುಂಡಿಗಳು ಬಿದ್ದು ಮಳೆಗಾಲದಲ್ಲಿ ನೀರು ತುಂಬಿ ನಿತ್ಯವು ವಾಹನ ಸವಾರರು ಸರ್ಕಸ್ ಮಾಡುವುದು ಅಲ್ಲದೆ ಅನೇಕರು ಹಾಳಾದ ರಸ್ತೆಯಲ್ಲಿ ಬಿದ್ದು ಅಪಘಾತಕ್ಕೀಡಾಗಿರುವ ಘಟನೆಗಳು ನಡೆದಿದ್ದವು.ಇದೆಲ್ಲದರ ಕುರಿತು ಪತ್ರಿಕೆಯಲ್ಲಿ ವರದಿ ಮಾಡಿ ಸರಕಾರದ ಗಮನ ಸೆಳೆಯಲಾಗಿತ್ತು.

Contact Your\'s Advertisement; 9902492681

ಇದನ್ನು ಗಮನಿಸಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧಿಕಾರಿಗಳಿಗೆ ತಾಕೀತು ಮಾಡಿ ನ್ಯಾಯಾಲಯದಲ್ಲಿನ ವ್ಯಾಜ್ಯ ಮುಗಿಯುವವರೆಗೆ ತಾತ್ಕಾಲಿಕ ರಸ್ತೆ ದುರಸ್ಥಿಗೊಳಿಸಿಕೊಡುವಂತೆ ತಿಳಿಸಿದ್ದರು.ಅಲ್ಲದೆ ಈ ಭಾಗದ ರೈತರಿಗು ಪ್ರಯಾಣಿಕರ ಸಂಕಷ್ಟದ ಮನವರಿಕೆ ಮಾಡಿ ರೈತರ ಮನವೊಲಿಸಿದ್ದರ ಪರಿಣಾಮವಾಗಿ ಇಂದು ದೇವಾಪುರ ಮನಗೂಳಿ ರಸ್ತೆ ದುರಸ್ಥಿ ಕಾರ್ಯಕ್ಕೆ ಚಾಲನೆ ದೊರೆತಿದೆ.

ಮಂಗಳವಾರ ಬೆಳಿಗ್ಗೆಯೆ ಪೊಲೀಸ್ ಅಧಿಕಾರಿಗಳು ಈ ರಸ್ತೆಯಲ್ಲಿ ಬೀಡು ಬಿಟ್ಟು ಕಾಮಗಾರಿ ದುರಸ್ಥಿಗೆ ಅನುವು ಮಾಡಿಕೊಟ್ಟರು.ಸದ್ಯ ದುರಸ್ಥಿ ಕಾಮಗಾರಿ ಭರದಿಂದ ಸಾಗಿದ್ದರಿಂದ ಈ ರಸ್ತೆಯ ಮೂಲಕ ಓಡಾಡುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ ಅಲ್ಲದೆ ಆದಷ್ಟು ಬೇಗ ನ್ಯಾಯಾಲಯದಲ್ಲಿನ ವ್ಯಾಜ್ಯ ಮುಗಿದು ಸುಸಜ್ಜಿತ ರಸ್ತೆ ನಿರ್ಮಾಣಗೊಳ್ಳುವಂತಾಗಲಿ ಎಂದು ಉಪನ್ಯಾಸಕ ಮಲ್ಲಿಕಾರ್ಜುನ ಬಾದ್ಯಾಪುರ ಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here