ಅಫಜಲಪುರ ರಸ್ತೆಯಲ್ಲಿ ನಾಲ್ಕು ಪಥದ ಮೇಲು ಸೇತುವೆ ನಿರ್ಮಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ; ಪ್ರಿಯಾಂಕ್ ಖರ್ಗೆ.

0
1070

ಕಲಬುರಗಿ: ಕಲಬುರಗಿ ನಗರದ ಅಫಜಲಪುರ ರಸ್ತೆಯಲ್ಲಿ ರೈಲ್ವೆ ಹಾದಿಗೆ ಅಡ್ಡಲಾಗಿ ನಾಲ್ಕು ಪಥದ ಮೇಲು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ಹಿಂದೆ ಈ ಸ್ಥಳದಲ್ಲಿ ಎರಡು ಪಥದ ಮೇಲು ಸೇತುವೆ ನಿರ್ಮಿಸಲು ಅಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಎರಡು ಪಥದ ರಸ್ತೆ ಮೇಲುಸೇತುವೆಗೆ ಬದಲಾಗಿ ನಾಲ್ಕು ಪಥದ ಮೇಲು ಸೇತುವೆ ನಿರ್ಮಿಸಲಾಗುತ್ತಿದ್ದು, ಪರಿಷ್ಕೃತ ಅಂದಾಜು ವೆಚ್ಚವನ್ನು 19.35 ಕೋಟಿ ರೂ.ಗಳಿಂದ 28.35 ಕೋಟಿ ರೂ.ಗಳಿಗೆ ಏರಿಸಲು ಸಚಿವ ಸಂಪುಟ ಸಭೆ ಸಮ್ಮತಿಸಿತು.

Contact Your\'s Advertisement; 9902492681

ಅಫಜಲ್ಪುರ ರಸ್ತೆಯಲ್ಲಿ ರೈಲ್ವೆ ಹಾದು ಹೋಗುವ ಸ್ಥಳದಲ್ಲಿ ಹೆಚ್ಚು ವಾಹನಗಳ ಸಂಚಾರವಿದ್ದು, ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸುಗಮ ಸಂಚಾರದ ಸಲುವಾಗಿ ನಾಲ್ಕು ಪಥದ ಮೇಲು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಿಸಲು ಆಲೋಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವರೂ ಆದ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here