ಕಲಬುರಗಿ: ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಸಂಸ್ಥೆ ಯ ಕೇಂದ್ರ ಕಛೇರಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇ. ವಿನೋದ ಕುಮಾರ ಮೊದಲಿಗೆ ಟ್ರಸ್ಟ್ ನ ಧರ್ಮದರ್ಶಿ ಗಳಿಗೆ ಸ್ವಾಗತಿಸಿ, ನಂತರ ಸಂಸ್ಥೆಯ ಅಧ್ಯಕ್ಷರಾದ ಶರಣಪ್ಪ ಜೇನವೆರಿ ಯವರು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು ನೇಕಾರ ಧರ್ಮಗುರು ಶ್ರೀ ದಾಸಿಮಯ್ಯ ಕೂಡಾ ತಮ್ಮ ಅಂಕಿತ ನಾಮ “ರಾಮ ನಾಥ” ಎಂದು ಬರೆದು ನಮ್ಮ ಶೈವ ಧರ್ಮ ಮತ್ತು ಸಿದ್ಧಾಂತ ವನ್ನು ಕನ್ನಡದ ವಚನ ಸಾಹಿತ್ಯದ ಮೂಲಕವೂ ರಾಮನ ಮತ್ತು ನಾಥಪಂಥ ವನ್ನು 11ನೇ ಶತಮಾನದಲ್ಲಿ ಬರೆದದ್ದನ್ನು ಯಾರು ಬೇಕಾದರೂ ಅವಲೋಕಿಸಿದಾಗ ತಿಳಿದು ಬರುತ್ತಿದೆ. ಶಿವನ ಪ್ರತಿರೂಪವೇ ಶ್ರೀ ರಾಮ ನೆಂದು ಇಷ್ಟ ದೇವರನ್ನಾಗಿ ನಂಬಿ ವಚನಾOಕಿತ ದ ಮೂಲಕ ಶ್ರೀ ರಾಮನ ಅಸ್ಥಿತ್ವ ಆಗಲೇ ನಿವಾರಿಸಿದ್ದರು.
ನೇಕಾರರ ಆರಾಧ್ಯ ದೈವ ನನ್ನಾಗಿ ಶ್ರೀ ದಾಸಿಮಯ್ಯನವರ ಅಸ್ಥಿತ್ವ ಮರು ಸ್ಥಾಪಿಸಬೇಕಾಗಿದೆ ದೇವಸಾಲಿ ಹಟಗಾರ ಸಮಾಜದ ಅಭುಧ್ಯಯಕ್ಕೆ ಸಂಕಲ್ಪಕ್ಕೆ ಕರೆ ನೀಡಿದರು. ಕೊನೆಯಲ್ಲಿ ಸುರಪುರಿನ ಷಣ್ಮುಖ ಚಂದ್ರ ಎಸ್. ಮಿಟ್ಟಾ ಎಲ್ಲರನ್ನೂ ವಂದಿಸಿದರು.