ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಅಂಬೇಡ್ಕರ್ ನಮ್ಮದೇವರು ಮೂಲಕ emedialine - August 6, 2020 0 85 Facebook Twitter Pinterest WhatsApp *●ಅಂಬೇಡ್ಕರ್ ನಮ್ಮದೇವರು●* ***************************** ಜಾತಿವಾದಿ ಈ ನಾಡೋಳಗ ಪೋರೊಹಿತರ ರಾಗದಾಗ ಮುಟ್ಟು ಮೈಲಿಗೆ ಆಟದಾಗ ಅಸ್ಪಶ್ಯರೆಲ್ಲ ಕಣ್ಣೀರಾಗ //ಪ// ಜಾತಿ ಹೆಸರಿಲೆ ಪೈ ಪೋಟಿ ಮನುಷತ್ವದ ಗಡಿ ದಾಟಿ ಬದಲಾಗಿಲ್ಲ ದೇಶದ ನೀತಿ ಮನುವಾದಿ ಸರ್ಕಾರದ ಮತಿ ವೇದ ಶಾಸ್ತ್ರದ ಹೆಸರಾಗ ಶೋಷಣೆ ಮಾಡುವ ಹುನ್ನಾರ ಇದು ಮನುವಾದಿ ವಿಚಾರ ಇದಕ್ಕೆ ನಮ್ಮದು ಧಿಕ್ಕಾರ ವಿಜ್ಞಾನಯಂತ್ರ ಯುಗದಾಗ ನೆಲ ಜಲ ವಾಯು ಮಾರ್ಗದಾಗ ಸಂವಿಧಾನದ ಅಡಿಯಾಗ ಭವಿಷ್ಯ ಹೇಳುವ ನೆಪದಾಗ ದುಡಿಯದೆ ತಿನ್ನುವವರು ನಾ ಶ್ರೇಷ್ಟ ಕುಲವೆಂದವರು ಒಡಗೂಡಿ ಬಾಳದವರು ವರ್ಣಭೇದ ತಂದವರು ನೊಂದವರ ಈ ಮೀಸಲಾತಿ ಮಾರಿತು ಸರ್ಕಾರ ಪೂರ್ತಿ ಮಂತ್ರ ಗಂಟೆ ಸದ್ದಿನ ಭೀತಿ ಸಂವಿಧಾನ ತಿದ್ದಿದ ರೀತಿ ಮಾಸಿತು ಮೂಲ ಕಾಯ್ದೆ ಸ್ಥಿತಿ ತಿದ್ದಿ ಕದ್ದರು ರೈತ ಆಸ್ತಿ ಹಗಲುಗಳ್ಳರ ಈ ಗಸ್ತಿ ಜಾತಿವಾದಿಗಳ ಈ ಮಸ್ತಿ ಹುಟ್ಟಿಬಂದಿ ಭಾರತದಾಗ ಹುಟ್ಟಲೇ ಬೇಕಾಗಿತು ಆಗ ದಿಟ್ಟ ಧೀರ ಶೂರಗಂಭೀರ ಅಂಬೇಡ್ಕರ್ ನಮ್ಮ ದೇವರ ಹುಟ್ಟಿ ಬಂದನು ಭೀಮ ಜಟ್ಟಿ ಬೆಟ್ಟದಷ್ಟು ಕಷ್ಟವ ಕುಟ್ಟಿ ವಿದ್ಯ ಕಲಿತ ಜಾತಿ ಮೆಟ್ಟಿ ಜ್ಞಾನದ ಬಾಗಿಲವ ತಟ್ಟಿ ಜ್ಞಾನ ಪಡದಿ ಸಾಗರ ದಾಟಿ ಓದಿನಲ್ಲಿ ನಿನಗಾರು ಸಾಟಿ ಸರ್ವ ವಿದ್ಯಯೋಳು ನೀ ಮೆಟ್ಟಿ ನೊಂದವರ ಪಾಲಿನ ಕೋಟಿ ಭೀಮ ನೋಡು ಭಾರತ ಸ್ಥಿತಿ ಕಳ್ಳ ಖಧಿಮರ ಈ ವಸ್ತಿ ಧರ್ಮ ಹೆಸರದಿ ರಾಜ್ಯ ನೀತಿ ಮತ ಪಡಿತಾರ ದುಡ್ಡು ಚಾಚಿ ಬುದ್ಧ ಬಸವ ನೀತಿ ಮೆಚ್ಚಿ ಅಂಬೇಡ್ಕರ್ ಹೋರಾಟ ನೆಚ್ಚಿ ನೊಂದು ಬರೆಯುವೆ ಕೈಬಿಚ್ಚಿ ಭಾರತ ಸಾಗಿದೆ ಜಾತಿ ನೆಚ್ಚಿ -ರಾಮಾನಂದ ರಾಜೂರ, ಗುರುಗಳು ತತ್ವ ಪದಕಾರರು, ತಾ. ಕುಕನೂರ, ಜಿ. ಕೊಪ್ಪಳ. ಮೊಬೈಲ್ : 9964611507