ಕಲಬುರಗಿ: ಮಹಾಮಾರಿ ಕೊರೊನಾಕ್ಕೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಯಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕ ರವಿಕುಮಾರ ನರಸಪ್ಪ (46) ಇಂದು ಮುಂಜಾನೆ ಕೊನೆ ಉಸಿರು ಎಳೆದಿದ್ದಾರೆ.
ಯಳಸಂಗಿ ಆರೋಗ್ಯ ಕೇಂದ್ರದಲ್ಲಿ ಕಳೆದ 10 ವರ್ಷದಿಂದ ಗುತ್ತಿಗೆ ನೌಕರನಾಗಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಹೊರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದರು. ಕಳೆದ ಒಂದು ವಾರದ ಹಿಂದೆ ಎಲ್ಲಾ ಆರೋಗ್ಯ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು ಆಗ ಇವರಿಗೆ ಪಾಜಿಟಿವ ಬಂದಿತ್ತು. ಹೀಗಾಗಿ ಇವರನ್ನು ವೈದ್ಯರು ಕಲಬುರಗಿ ಜಿಮ್ಸಗೆ ಚಿಕಿತ್ಸೆಗೆ ದಾಖಲಿಸಿಲಾಗಿತ್ತು. ಆದರೆ ಅಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆದರೆ ಜಿಮ್ಸಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಇರುವುದರಿಂದ ಅವರನ್ನು ಕಲಬುಗರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗದೆ ಆದರೆ ಕಳೆಡದ ಎರಡು ದಿನದ ಹಿಂದೆ ತಿವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಇಂದು ಗುರುವಾರ ಮುಂಜಾನೆ ಕೊನೆ ಉಸಿರು ಎಳೆದಿದ್ದಾರೆ.
ತಾಯಿ ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯನ್ನು ಅಗಲಿದ್ದ, ಕುಟುಂಬಕ್ಕೆ ಆಧಾರವಾಗಿದ್ದ ಇವರ ಅಗಲಿವಿಕೆಯಿಂದ ಇಡಿ ಕುಟುಂಬ ಅನಾಥವಾಗಿದೆ ಸರಕಾರ ಕೊರೊನಾ ಹೋರಾಟದಲ್ಲಿ ಭಾಗಿಯಾಗಿ ಅದೆ ಕೊರೊನಾಕ್ಕೆ ಬಲಿಯಾದ ಮೊದಲ ಆರೋಗ್ಯ ಸಿಬ್ಬಂದಿ ಇವರಾಗಿದ್ದಾರೆ.
ಜೀವ ಕಾಪಾಡುವ ಜೀವಕ್ಕೆ ರಕ್ಷಣೆ ಇಲ್ಲದಾಗಿದ್ದು ಸರಕಾರ ಇದನ್ನು ಗಂಭಿರವಾಗಿ ಪರಿಗಣಿಸಿ ಇವರ ಕುಟುಂಬಕ್ಕೆ ವಿಮೆ ನೀಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.